ನ್ಯೂಸ್

6 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನ ಕದ್ದ ದಂಪತಿ; ಸಿಸಿಟಿವಿ ದೃಶ್ಯ ವೈರಲ್​ | Robbery

Robbery: ಆಭರಣ ಶೋರೂಂವೊಂದರಲ್ಲಿ ದಂಪತಿಗಳಿಬ್ಬರು 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣವನ್ನು ಕಳ್ಳತನ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದ್ದು, ಇದೀಗ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್​ ಆಗಿದೆ.

ದೃಶ್ಯದಲ್ಲೇನಿದೆ?

ದಂಪತಿಗಳು ಆಭರಣ ಅಂಗಡಿಗೆ ಒಳಗೆ ಬಂದಿದ್ದು, ಒಂದೊಂದೆ ಹಾರವನ್ನು ತೋರಿಸುವಂತೆ ಸಿಬ್ಬಂದಿ ಬಳಿ ಕೇಳಿದ್ದಾರೆ. ಅವರು ತೋರಿಸುತ್ತಿರುವಂತಹ ಸಮಯದಲ್ಲಿ ಮಹಿಳೆಯು ತನ್ನ ತೊಡೆಯ ಮೇಲೆ ಆಭರಣಗಳನ್ನು ಇಟ್ಟುಕೊಂಡಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ.

ಅಂಗಡಿಯ ಮಾಲೀಕ ಗೌರವ ಪಂಡಿತ್​ ಎಂದು ಗುರುತಿಸಲಾಗಿದೆ. ಇವರು ರಾತ್ರಿ ಆಭರಣಗಳ ಪಟ್ಟಿಯನ್ನು ಪರಿಶೀಲಿಸುತ್ತಿರುವಾಗ 6 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಆಭರಣ ಕಾಣೆಯಾಗಿರುವುದನ್ನು ಕಂಡುಕೊಂಡಿದ್ದಾರೆ. ಇದಾದ ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದಾಗ ದಂಪತಿ ಚಿನ್ನವನ್ನು ಕದ್ದಿರುವುದನ್ನು ಗಮನಿಸಿ ಇವರಿಬ್ಬರ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ಪೊಲೀರು ದಂಪತಿ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಚಿನ್ನದ ಬೆಲೆ

ಅಕ್ಟೋಬರ್ 1, 2025 ರ ಹೊತ್ತಿಗೆ, ಉತ್ತರ ಪ್ರದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 11,749 ರೂಪಾಯಿಂದ 11,846 ರಷ್ಟಿದ್ದರೆ, ಲಕ್ನೋದಂತಹ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 10,860ರೂ ಗಳಷ್ಟಿದೆ. (ಏಜೆನ್ಸೀಸ್​)