ನ್ಯೂಸ್

ಮಹಾ ಕುಸಿತದ ನಡುವೆಯೂ 10% ಏರಿಕೆ: ಅಪ್ಪರ್ ಸರ್ಕ್ಯೂಟ್ ಹಿಟ್​ ಆದ ಪೆನ್ನಿ ಸ್ಟಾಕ್​ ಯಾವುದು ಗೊತ್ತೆ?

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಟ್ರೆಂಡ್‌ನಿಂದ ನಿರಾಶೆ ಸೃಷ್ಟಿಯಾಗಿ ಷೇರುಪೇಟೆಯಲ್ಲಿ ಮಂಗಳವಾರ ಭೂಕಂಪ ಸಂಭವಿಸಿದೆ. ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಅಂದಾಜು 6 ಪ್ರತಿಶತದಷ್ಟು ಕುಸಿತ ಕಂಡುಬಂದಿದೆ, ಇದರಿಂದಾಗಿ ಹೂಡಿಕೆದಾರರು 31 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ಮಂಗಳವಾರ ಬಹುತೇಕ ಕಂಪನಿಗಳ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಏತನ್ಮಧ್ಯೆ, ಕೆಲವು ಷೇರುಗಳಲ್ಲಿ ಭಾರಿ ಖರೀದಿ ಕಂಡುಬಂದಿದೆ. ಈ ಷೇರುಗಳಲ್ಲಿ ಒಂದು ಕೋರೆ ಫುಡ್ಸ್ ಲಿಮಿಟೆಡ್‌ಗೆ ಸೇರಿದೆ. ಇದು ಪೆನ್ನಿ ಸ್ಟಾಕ್ ಆಗಿದೆ. ಈ ಸ್ಟಾಕ್ ಮಂಗಳವಾರ 10% ರ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿದೆ. ಕೋರೆ ಫುಡ್ಸ್ ಲಿಮಿಟೆಡ್‌ನ ಷೇರುಗಳ ಬೆಲೆ 6.85 ರೂ. ಆಗಿದೆ.

ಕೋರೆ ಫುಡ್ಸ್ ಲಿಮಿಟೆಡ್‌ನ ಷೇರುಗಳು ಮಂಗಳವಾರ 10% ರಷ್ಟು ಏರಿಕೆಯಾಗಿ ಇಂಟ್ರಾಡೇ ಗರಿಷ್ಠ ಬೆಲೆಯಾದ ರೂ 6.85 ಕ್ಕೆ ತಲುಪಿದವು. ಈ ಷೇರುಗಳ ಬೆಲೆ ಒಂದು ತಿಂಗಳಲ್ಲಿ 6% ರಷ್ಟು ಏರಿಕೆಯಾಗಿದೆ. ವರ್ಷದ ಆರಂಭದಿಂದ ಇದುವರೆಗೆ ಶೇ. 15.33ರಷ್ಟು ಏರಿಕೆಯಾಗಿದೆ. ಐದು ವರ್ಷಗಳಲ್ಲಿ ಶೇ. 44.21ರಷ್ಟು ಏರಿಕೆಯಾಗಿದೆ. ಇದರ 52 ವಾರಗಳ ಗರಿಷ್ಠ ಬೆಲೆ ರೂ 9.27 ಮತ್ತು ಕನಿಷ್ಠ ಬೆಲೆ ರೂ 5.92 ಆಗಿದೆ. ಕಂಪನಿ ಮಾರುಕಟ್ಟೆ ಕ್ಯಾಪ್ 7.98 ಕೋಟಿ ರೂ. ಇದೆ.

ಪೆನ್ನಿ ಸ್ಟಾಕ್ ಎಂದರೇನು?:

ಪೆನ್ನಿ ಷೇರುಗಳು ಕಡಿಮೆ ಬೆಲೆಯಲ್ಲಿ ವ್ಯಾಪಾರ ಮಾಡುವ ಸಣ್ಣ ಕಂಪನಿಗಳ ಷೇರುಗಳಾಗಿವೆ. ಇವುಗಳ ಬೆಲೆ ಸಾಮಾನ್ಯವಾಗಿ ಪ್ರತಿ ಷೇರಿಗೆ 10 ರೂ. ಒಳಗೆ ಇರುತ್ತದೆ. ಪೆನ್ನಿ ಸ್ಟಾಕ್‌ಗಳು ಅಪಾಯಗಳಿಂದ ಕೂಡಿರುತ್ತವೆ. ಸಣ್ಣ, ಉದಯೋನ್ಮುಖ ಕಂಪನಿಗಳ ಕ್ಷಿಪ್ರ ಬೆಳವಣಿಗೆಯ ಸಾಮರ್ಥ್ಯದ ಲಾಭವನ್ನು ಪಡೆಯಲು ಅವಕಾಶಗಳನ್ನು ಹುಡುಕುತ್ತಿರುವ ಹೂಡಿಕೆದಾರರನ್ನು ಪೆನ್ನಿ ಸ್ಟಾಕ್​ಗಳು ​​ಆಕರ್ಷಿಸುತ್ತವೆ.