ಬಾಗೂರು: ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಡಿ.ಎನ್.ನಾಗರಾಜು, ಉಪಾಧ್ಯಕ್ಷರಾಗಿ ಗಂಗಾಧರ್ ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದ್ಯಾವೇನಹಳ್ಳಿ ಗ್ರಾಮದ ಡಿ.ಎನ್.ನಾಗರಾಜ್ ಹಾಗೂ ದ್ಯಾವನೂರು ಗ್ರಾಮದ ಗಂಗಾಧರ್ ನಾಮಪತ್ರ ಸಲ್ಲಿಸಿದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಲತಾ ಘೋಷಿಸಿದರು.
ನೂತನ ಅಧ್ಯಕ್ಷ ಡಿ.ಎನ್.ನಾಗರಾಜ್ ಮಾತನಾಡಿ, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಬ್ಯಾಂಕಿನ ನಿರ್ದೇಶಕರಾಗಿರುವ ಸಿ.ಎನ್. ಬಾಲಕೃಷ್ಣ ಅವರ ಸಲಹೆ, ಸಹಕಾರ ಪಡೆದು ರೈತರಿಗೆ ಹಾಗೂ ಇರುವ ಷೇರುದಾರ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ನಿರ್ದೇಶಕರಾದ ಬಿ.ಎಚ್.ಶಿವಣ್ಣ, ಚನ್ನಕೇಶವ (ಹರೀಶ್), ಮರುವನಹಳ್ಳಿ ಕೃಷ್ಣೇಗೌಡ, ಪದ್ಮಾ, ಸಾಗರ್, ವಿಜಯಕುಮಾರ್, ಬಿ. ವಿ.ರಂಗಸ್ವಾಮಿ, ಅನ್ನಪೂರ್ಣಾ, ಬನವಾಸೆ ಸುರೇಶ್, ಬಿ.ಟಿ.ರಂಗಸ್ವಾಮಿ, ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎನ್. ಕೆಂಪೇಗೌಡ, ಮುಖಂಡರಾದ ಓಬಳಾಪುರ ಬಸವರಾಜ್, ದ್ಯಾವನಹಳ್ಳಿ ಶಿವಣ್ಣ, ಮರುಗೂರು ಅನಿಲ್, ಭುವನಹಳ್ಳಿ ಇಂದ್ರೇಶ್, ಕಾಂತರಾಜು, ತಿಮ್ಲಾಪುರ ಬಸವರಾಜ್, ಮಲ್ಲೇಶ್, ಲಕ್ಷ್ಮಣ್, ಸ್ಟುಡಿಯೋ ರಘು, ತಿಮ್ಮೇಗೌಡ, ಯುವ ಮುಖಂಡ ವರುಣ್, ಕಾರ್ಯನಿರ್ವಹಣಾಧಿಕಾರಿ ಆನಂದ್, ಬ್ಯಾಂಕಿನ ಸಿಬ್ಬಂದಿ ಬಿ.ಎನ್.ರಮೇಶ್, ರೇಣುಕಾಸ್ವಾಮಿ, ಗಿರಿ, ರೇಖಾ ಹಾಜರಿದ್ದರು.