ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರತ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಮಹದೇವ ಶೆಟ್ಟಿ ಅಭಿರೋಧವಾಗಿ ಆಯ್ಕೆಗೊಂಡರು. ಬಸವಣ್ಣ, ಶಿವರಾಜು ಸೇರಿದಂತೆ ಇತರರು ಇದ್ದರು. 
ನ್ಯೂಸ್

ಕೂಡ್ಲಾಪುರ ಕೃಷಿ ಪತ್ತಿನ ಸಂಘಕ್ಕೆ ಅವಿರೋಧ ಆಯ್ಕೆ

ನಂಜನಗೂಡು: ತಾಲೂಕಿನ ಕೂಡ್ಲಾಪುರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ರತ್ನಮ್ಮ, ಉಪಾಧ್ಯಕ್ಷರಾಗಿ ಮಹದೇವ ಶೆಟ್ಟಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಗೊಂಡರು.

ಒಟ್ಟು 12 ಸದಸ್ಯ ಬಲದ ನಿರ್ದೇಶಕರ ಸ್ಥಾನದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಕೆ.ಸಿ.ರಘು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ.ರಾಜು, ಮಾದಶೆಟ್ಟಿ, ಪುಟ್ಟಸ್ವಾಮಿ ಚಿಕ್ಕಮಾದ ಶೆಟ್ಟಿ, ಬಸವಣ್ಣ, ಶಿವರಾಜು, ಸುಬ್ಬಣ್ಣ, ರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.