ನ್ಯೂಸ್

ಶುರುವಾಯಿತು ಅನ್​ಲಾಕ್​; ರಾಜ್ಯದಲ್ಲಿ ನಾಳೆಯಿಂದ ಇವೂ ಓಪನ್​...

Webdesk - Ravikanth

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾಗಿ ಲಾಕ್​ಡೌನ್​ ಜಾರಿಗೊಳಿಸಿದ್ದಲ್ಲದೆ, ಅದನ್ನು ಪದೇಪದೆ ವಿಸ್ತರಿಸುತ್ತಲೇ ಬಂದಿರುವ ಸರ್ಕಾರ ಇದೀಗ ನಿಧಾನವಾಗಿ ಅನ್​ಲಾಕ್​ ಪ್ರಕ್ರಿಯೆಯನ್ನು ಆರಂಭಿಸಿದಂತಿದೆ. ಅದನ್ನು ಸಾಬೀತುಪಡಿಸುವಂತೆ ಒಂದೊಂದೇ ಸೇವೆಗಳು ತೆರೆದುಕೊಳ್ಳುತ್ತಿವೆ.

ಅನ್​ಲಾಕ್​ ಪ್ರಕ್ರಿಯೆ ಒಂದು ಹಂತವಾಗಿ ಕೆಎಸ್​ಆರ್​ಟಿಸಿ ಈಗಾಗಲೇ ಸೇವೆಗೆ ಸಜ್ಜಾಗುತ್ತಿದ್ದು, ಆನ್​ಲೈನ್​ನಲ್ಲಿ ಮುಂಗಡ ಟಿಕೆಟ್​ ಬುಕಿಂಗ್​​ಗೂ ಅವಕಾಶ ನೀಡಲು ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ ಜೂ. 8ರಿಂದಲೇ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭವಾಗಲಿದ್ದು, ಆ ಕುರಿತು ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿವೆ.

ಈ ನಡುವೆ ಮತ್ತೊಂದು ಹಂತದ ಅನ್​ಲಾಕ್​ ಗೋಚರವಾಗಿದೆ. ಅದೇನೆಂದರೆ ನಾಳೆಯಿಂದ ರಾಜ್ಯದಲ್ಲಿ ನೋಂದಣಿ ಕಚೇರಿಗಳು ತೆರೆಯಲಿವೆ. ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ರಿಜಿಸ್ಟ್ರಾರ್​ ಮತ್ತು ಸಬ್​ ರಿಜಿಸ್ಟ್ರಾರ್ ಕಚೇರಿಗಳು ನಾಳೆಯಿಂದಲೇ ತೆರೆಯಲಿವೆ. ಕೋವಿಡ್​ ಮಾರ್ಗಸೂಚಿಗಳಿಗೆ ಅನುಸಾರ ಈ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.