ನ್ಯೂಸ್

ರಾಜ್ಯದಲ್ಲಿ ಹೀಗಿರಲಿದೆ ಅನ್​ಲಾಕ್​-05

lakshmihegde

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಜಾರಿ ಮಾಡಿದ್ದ ಲಾಕ್​ಡೌನ್ ಅನ್ನು ಹಂತಹಂತವಾಗಿ ಸಡಿಲ ಮಾಡುತ್ತಿರುವ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದಲ್ಲಿ ಅ.31ರವರೆಗೆೆ ಅನ್ವಯವಾಗುವಂತೆ ಮತ್ತೊಂದು ಸುತ್ತಿನ ಅನ್​ಲಾಕ್ ಮಾರ್ಗಸೂಚಿ ಪ್ರಕಟಿಸಿದೆ. ಪ್ರಮುಖವಾಗಿ ಶಾಲೆಗಳ ಪುನರಾರಂಭ, ಜನತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸಿದೆ. ಅ.15ರ ನಂತರ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸುವ ಸಂಬಂಧ ಹಂತಹಂತವಾಗಿ ತೀರ್ಮಾನ ತೆಗೆದುಕೊಳ್ಳಬಹುದು, ಅದಕ್ಕೂ ಮುನ್ನ ಸಂಬಂಧಿಸಿದ ಶಾಲಾ ಮತ್ತು ಸಂಸ್ಥೆಯ ಆಡಳಿತ ಮಂಡಳಿ, ಆರೋಗ್ಯ ಇಲಾಖೆ ಜತೆ ಸಮಾಲೋಚಿಸಿ ಸ್ಥಳೀಯ ಪರಿಸ್ಥಿತಿ ಆಧರಿಸಿ, ಷರತ್ತಿಗೆ ಒಳಪಟ್ಟು ಶಾಲೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಕಾಲೇಜುಗಳ ಕುರಿತಂತೆ ಅ.15ರ ನಂತರ ಕೇಂದ್ರ ಶಿಕ್ಷಣ ಇಲಾಖೆ ಜತೆ ಉನ್ನತ ಶಿಕ್ಷಣ ಇಲಾಖೆ ಸಮಾಲೋಚಿಸಿ ಪರಿಸ್ಥಿತಿ ಆಧಾರಿಸಿ ತೀರ್ಮಾನ ಕೈಗೊಳ್ಳಬಹುದಾಗಿದೆ. ಆದಾಗ್ಯೂ ಈ ಪ್ರಾಯೋಗಿಕ, ಸಂಶೋಧನಾ ಚಟುವಟಿಕೆಗಳು ಅ.15ರ ನಂತರ ಆರಂಭಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯೇ ಸುರಕ್ಷಿತರಲ್ಲ: ಸಿದ್ದರಾಮಯ್ಯ ಆತಂಕ ಸಮಾರಂಭಕ್ಕೆ ಶೇ.50ರ ಮಿತಿ: ಕ್ರೀಡೆ, ಮನರಂಜನೆ, ಸಾಮಾಜಿಕ, ಧಾರ್ವಿುಕ, ಶೈಕ್ಷಣಿಕ ಕಾರ್ಯಕ್ರಮಗಳು ಇತರ ಸಮಾರಂಭಗಳಿಗೆ ಸಂಬಂಧಿದಂತೆ ಪಾಲ್ಗೊಳ್ಳುವವರಿಗೆ ಮಿತಿ ಹಾಕಲಾಗಿದೆ. 200ರ ಪರಿಮಿತಿಯ ಸಭಾಂಗಣದಲ್ಲಿ ಶೇ.50 ಹಾಜರಾತಿಗೆ ಮಾತ್ರ ಅವಕಾಶ ನೀಡಲಾಗಿದೆ.

15ರಿಂದ ಇದಕ್ಕೆಲ್ಲ ಅವಕಾಶ
  • ಕ್ರೀಡಾಪಟುಗಳ ತರಬೇತಿಗಾಗಿ ಬಳಸುತ್ತಿರುವ ಈಜುಗೊಳ
  • ಸಿನಿಮಾ, ಮಲ್ಟಿಪ್ಲೆಕ್ಸ್, ರಂಗಮಂದಿರ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಮಂದಿಗೆ ಮಾತ್ರ ಅನುಮತಿ
  • ಮನರಂಜನಾ ಉದ್ಯಾನವನಗಳು, ಇದೇ ರೀತಿ ಸ್ಥಳಗಳು
ಮಾಸ್ಕ್ ಮರೆತರೆ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಇನ್ನು ಮುಂದೆ ದುಬಾರಿ ದಂಡ ಬೀಳಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1000 ರೂ., ಇನ್ನುಳಿದ ಸ್ಥಳಗಲ್ಲಿ 500 ರೂ. ದಂಡ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ದಂಡನೀಯ ಅಪರಾಧವಾಗಿದೆ.