ನ್ಯೂಸ್

ಹೊಟ್ಟೆ ನೋವೆಂದು ಶೌಚಾಲಯಕ್ಕೆ ಹೋಗಿ ಮಗುವಿಗೆ ಜನ್ಮಕೊಟ್ಟಳು! ಹೆರಿಗೆಯಾದ್ಮೇಲೆ ಗೊತ್ತಾಯ್ತು ತಾಯಿ ಆಗಿದ್ದೇನೆ ಅಂತ..

ಬ್ರಿಟನ್: ಯುನೈಟೆಡ್ ಕಿಂಗ್‌ಡಮ್‌ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ಹೋದಾಗ ಮಗುವಿಗೆ ಜನ್ಮ ನೀಡಿದಳು. ಈ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಈ ಸುದ್ದಿ ವೈದ್ಯಕೀಯಲೋಕ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಡೆದಿದ್ದೇನು?: 20 ವರ್ಷದ ಜೆಸ್ ಡೇವಿಸ್ ಎನ್ನುವ ಯುವತಿಗೆ ಅಂದು ಹುಟ್ಟುಹಬ್ಬವಾಗಿತ್ತು. ಏಕಾಏಕಿ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಾತ್ ರೂಮಿಗೆ ಹೋದ್ಮೇಲೆ ನೋವು ಹೆಚ್ಚಾಗಿದೆ. ಮಗುವಿನ ತಲೆಯೊಂದು ಹೊರಗೆ ಬಂದ ಅನುಭವವಾಗಿದೆ. ಮಗುವನ್ನು ಹೊರ ತೆಗೆದಿದ್ದಾಳೆ. ನಂತ್ರ ಏನು ಮಾಡ್ಬೇಕು ಎಂಬುದು ಆಕೆಗೆ ಗೊತ್ತಾಗ್ಲಿಲ್ಲ. ತಕ್ಷಣ ತನ್ನ ಸ್ನೇಹಿತನಿಗೆ ವಿಷ್ಯ ತಿಳಿಸಿದ್ದಾಳೆ. ಅಲ್ಲಿಗೆ ಬಂದ ಆಕೆ ಸ್ನೇಹಿತ ಮಗು ಹಾಗೂ ಜೆಸ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇಬ್ಬರೂ ಆರೋಗ್ಯವಾಗಿದ್ದಾರೆ. ಹೆರಿಗೆಯಾದ್ಮೇಲೆ ಆಕೆಗೆ ತಾನು ಗರ್ಭಿಣಿ ಎಂಬ ವಿಷ್ಯ ಗೊತ್ತಾಗಿದೆ. ಜೆಸ್ ಪ್ರಕಾರ ಆಕೆ ಮಗುವಿನ ತೂಕ ಎರಡೂವರೆ ಕಿಲೋ ಇತ್ತು.

ಜೆಸ್ ಡೆವಿಸ್ ಹಾರ್ಮೋನ್ ಬದಲಾವಣೆ, ಜೆಸ್ ಹಾರ್ಮೋನ್ ವ್ಯತ್ಯಾಸದಿಂದ ಬಳಲುತ್ತಿದ್ದಳು. ಹಾಗಾಗಿ ಆಕೆಗೆ ತಿಂಗಳು ತಿಂಗಳು ಪಿರಿಯಡ್ಸ್ ಆಗ್ತಿರಲಿಲ್ಲ. ಜೆಸ್, ಸೌತಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಳು. ಹಾರ್ಮೋನ್ ಮಾತ್ರೆಯನ್ನೂ ಆಕೆ ಸೇವಿಸುತ್ತಿದ್ದಳು. ಜೆಸ್ ಹೆರಿಗೆಗೆ ಕೆಲವು ದಿನಗಳ ಮೊದಲಷ್ಟೆ ಹಾರ್ಮೋನ್ ಮಾತ್ರೆ ಬದಲಿಸಿದ್ದಳು. ಆಕೆ ಹೊಟ್ಟೆ ದೊಡ್ಡದಾಗಿರಲಿಲ್ಲ. ಸ್ವಲ್ಪ ಬಂದ ಹೊಟ್ಟೆಯನ್ನು ಬೊಜ್ಜು ಎಂದು ಭಾವಿಸಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸದ ಜೆಸ್, ವೈದ್ಯರನ್ನು ಭೇಟಿಯಾಗಿರಲಿಲ್ಲ. ಆರಾಮವಾಗಿ ಪ್ರತಿ ದಿನ ಕಾಲೇಜಿಗೆ ಹೋಗ್ತಿದ್ದಳು ಜೆಸ್.

ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗದಿರೋದೇ ಇದಕ್ಕೆ ಕಾರಣವಾಗಿರುತ್ತೆ. ಅಪರೂಪಕ್ಕೆ ಪಿರಿಯಡ್ಸ್ ಆಗ್ತಿದ್ದರೂ ಗರ್ಭಧರಿಸುವ ಮಹಿಳೆಯರಿದ್ದಾರೆ. ಸಾಮಾನ್ಯವಾಗಿ ಪಿರಿಯಡ್ಸ್ ಮಿಸ್ ಆಗೋದು, ವಾಕರಿಗೆ, ತಲೆಸುತ್ತು ಗರ್ಭಿಣಿಯ ಆರಂಭದ ಲಕ್ಷಣವಾಗಿದೆ.