ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಸಪ್ತಸ್ವರ ಸಂಗೀತ ವಿದ್ಯಾಲಯದ ಗುರುವಂದನಾ ಕಾರ್ಯಕ್ರಮದಲ್ಲಿ ಡಾ.ರಾಮಕೃಷ್ಣ ಮರಾಠೆ, ಎಲ್.ಎಸ್.ಶಾಸ್ತ್ರಿ, ನಿರ್ಮಲಾ ಪ್ರಕಾಶ, ಸೂರ್ಯಪ್ರಕಾಶ ಅಯ್ಯರ ಇತರರಿದ್ದರು. 
ನ್ಯೂಸ್

ವಿಶಿಷ್ಟ ಕಲೆ ಸಂಗೀತ ಸಾಧನೆಗೆ ಬೇಕು ನಿರಂತರ ಪ್ರಯತ್ನ

ಬೆಳಗಾವಿ: ಸಂಗೀತ ವಿಶಿಷ್ಟವಾದ ಕಲೆ. ಇದಕ್ಕಾಗಿ ಸಹನೆ, ಛಲ, ಸತತ ಪ್ರಯತ್ನದ ತಪಸ್ಸು ಬೇಕು. ಪ್ರಸಿದ್ಧಿ ಬರುವ ಸಮಯದಲ್ಲಿ ಬಂದೇ ಬರುತ್ತದೆ. ಆದರೆ ಪ್ರಸಿದ್ಧಿಗಾಗಿಯೇ ಸಂಗೀತ ಬೆನ್ನು ಹತ್ತಿದವರಿಗೆ ಅದು ಸಿಗಲಾರದು ಎಂದು ಹಿರಿಯ ಲೇಖಕ ಡಾ. ರಾಮಕೃಷ್ಣ ಮರಾಠೆ ಹೇಳಿದರು.

ಹಿಂದವಾಡಿಯ ಐಎಂಇಆರ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಪ್ತಸ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ವೇದ, ಉಪನಿಷತ್ತುಗಳು ಗುರುವಿಗಿಂತ ಬೇರೊಬ್ಬ ದೇವರಿಲ್ಲ ಎಂದು ಹೇಳುತ್ತವೆ. ಈಗ ಗುರು-ಶಿಷ್ಯರ ಸಂಬಂಧವೆನ್ನುವುದು ಉಳಿದುಕೊಂಡಿದ್ದರೆ ಅದು ಸಂಗೀತ ಕ್ಷೇತ್ರದಲ್ಲಿ ಮಾತ್ರ ಎಂದರು.

ವಿದ್ಯಾರ್ಥಿಗಳಿಂದ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ, ಹಾರ್ಮೋನಿಯಂ, ತಬಲಾ, ಕಥಕ್ ಮತ್ತು ಭರತ ನಾಟ್ಯ ನೃತ್ಯಗಳ ಪ್ರದರ್ಶನ ನಡೆಯಿತು. ಮುಕುಂದ ಗೋರೆ, ನಾರಾಯಣ ಗಣಾಚಾರಿ, ಜೀತೇಂದ್ರ ಸಾಬಣ್ಣವರ, ಶ್ರೀಪತಿ ದೇವ, ನಿತಿನ ಸುತಾರ, ಪ್ರಮೋದ ಸೇಠ ಸಾಥ್ ನೀಡಿದರು. ಹಿರಿಯ ಲೇಖಕ ಎಲ್.ಎಸ್.ಶಾಸ್ತ್ರಿ, ಸೂರ್ಯಪ್ರಕಾಶ ಅಯ್ಯರ, ನಿರ್ಮಲಾ ಪ್ರಕಾಶ, ಗೀತಾ ಸಬಾನೆ ಇತರರಿದ್ದರು.