ನ್ಯೂಸ್

ಕೇಂದ್ರ ಸಚಿವ ಶ್ರೀಪಾದ್​ ನಾಯ್ಕ್ ಆರೋಗ್ಯದಲ್ಲಿ ಏರುಪೇರು; ದೆಹಲಿಯಿಂದ ಗೋವಾಕ್ಕೆ ಬಂದ ವೈದ್ಯರ ತಂಡ

ಪಣಜಿ: ಕೊವಿಡ್​-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಯುಷ್​ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.

ಶ್ರೀಪಾದ್​ ನಾಯ್ಕ್​ ಅವರ ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟ ಇಂದು ಕುಸಿದಿದೆ. ಇಂದು ಸಂಜೆ ದೆಹಲಿಯ ಏಮ್ಸ್​ ಮತ್ತು ಕಮಾಂಡ್​ ಆಸ್ಪತ್ರೆಯ ತಜ್ಞ ವೈದ್ಯರು ಗೋವಾಕ್ಕೆ ತೆರಳಿದ್ದು, ಸಚಿವರ ಆರೋಗ್ಯದ ಸಂಪೂರ್ಣ ವರದಿ ಪಡೆಯಲಿದ್ದಾರೆ. ಹಾಗೇ ಚಿಕಿತ್ಸೆ ನೀಡಲಿದ್ದಾರೆ ಎಂದೂ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್​ಗೆ ಮಾದರಿ ನಾಯಕರು ಯಾರು ಗೊತ್ತೆ..?

ದೆಹಲಿಯಿಂದ ಆಗಮಿಸಿರುವ ವೈದ್ಯರ ತಂಡ ಸೂಚಿಸಿದರೆ ನಾಯ್ಕ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೇ ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್​ 12ರಂದು ಶ್ರೀಪಾದ್​ ನಾಯ್ಕ್​ ಅವರು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನದಿಂದ ಅವರ ಆರೋಗ್ಯದಲ್ಲಿ ಏರಿಳಿತವುಂಟಾಗಿದೆ. (ಏಜೆನ್ಸೀಸ್​)