ನ್ಯೂಸ್

ರಾಹುಲ್​ಗಾಂಧಿ ನಂಬರ್​ ಒನ್​​ ಭಯೋತ್ಪಾದಕ; ಸಚಿವ ರವನೀತ್ ಸಿಂಗ್ ಹೀಗೆಳಿದ್ದೇಕೆ?

ಪಾಟ್ನಾ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ಗಾಂಧಿ ವಿರುದ್ಧ ಸಚಿವ ರವನೀತ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ರಾಹುಲ್​ಗಾಂಧಿ ನಂಬರ್​​.1 ಭಯೋತ್ಪಾದಕ ಎಂದು ಹೇಳಿದರು. ಭಾಗಲ್ಪುರದಲ್ಲಿ ನಡೆದ ವಂದೇ ಭಾರತ್ ಎಕ್ಸ್‌ಪ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು, ರಾಹುಲ್ ಗಾಂಧಿ ಸಿಖ್ಖರನ್ನು ಒಡೆಯಲು ಯತ್ನಿಸಿದ್ದಾರೆ. ಸಿಖ್ಖರು ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ, ಇದು ಕಿಡಿ ಹಚ್ಚುವ ಪ್ರಯತ್ನವಾಗಿದೆ. ರಾಹುಲ್ ಗಾಂಧಿ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿದರು.

ಯಾರ ವಿರುದ್ಧವಾದರೂ ಸಂಸ್ಥೆಯು ಮೊದಲು ಕ್ರಮಕೈಗೊಳ್ಳಬೇಕಾದರೆ. ಅದು ರಾಹುಲ್ ಗಾಂಧಿ ಎಂದು ಹೇಳಿದರು. ಭಯೋತ್ಪಾದಕರ ಪಟ್ಟಿಯಲ್ಲಿ ಅವರ ಹೆಸರೇ ಮೊದಲಿರಬೇಕು. ನನ್ನ ಪ್ರಕಾರ ರಾಹುಲ್​ಗಾಂಧಿ ಭಾರತೀಯನಲ್ಲ. ಅವರಿಗೆ ಭಾರತದ ಮೇಲೆ ಪ್ರೀತಿಯಿಲ್ಲ. ಅವರು ಭಾರತದ ಹೊರಗೆ ಹೆಚ್ಚು ಸಮಯ ಕಳೆದಿದ್ದಾರೆ. ಅವರ ಸ್ನೇಹಿತರು ಹಾಗೂ ಕುಟುಂಬ ಅಲ್ಲಿದೆ. ಇದರಿಂದಾಗಿ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ, ಹೊರಹೋಗಿ ಎಲ್ಲವನ್ನು ತಪ್ಪು ಹೇಳುತ್ತಾರೆ ಎಂದಿದ್ದಾರೆ.

ಇದಲ್ಲದೇ ರಾಹುಲ್ ಗಾಂಧಿ ಅವರು ದೇಶ ಬಯಸಿದ ಹೇಳಿಕೆಗಳನ್ನು ನೀಡುತ್ತಾರೆಯೇ. ಬಾಂಬ್ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಪ್ರತ್ಯೇಕತಾವಾದಿಗಳು ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಜನರನ್ನು ಕೊಲ್ಲಲು ಪ್ರಯತ್ನಿಸುವ ಮತ್ತು ಬಾಂಬ್​​ ಸ್ಫೋಟಿಸುವ ಬಗ್ಗೆ ಮಾತನಾಡುವ ಜನರು ರಾಹುಲ್ ಗಾಂಧಿಯ ಬೆಂಬಲಕ್ಕೆ ಬಂದಾಗ ರಾಹುಲ್ ಗಾಂಧಿ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಅರ್ಥಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ ಸಿಖ್ಖರಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯಿಂದ ಅಸಮಾಧಾನಗೊಂಡಿರುವ ರವನೀತ್ ಸಿಂಗ್ ಬಿಟ್ಟು ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಭಾರತದಲ್ಲಿ ರಾಜಕೀಯಕ್ಕಾಗಿ ಹೋರಾಟ ಮಾಡಲಾಗುತ್ತಿಲ್ಲ ಬದಲಾಗಿ ಇದಕ್ಕಾಗಿಯೇ ಹೋರಾಡಲಾಗುತ್ತಿದೆ. ಹೋರಾಟ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾರತದಲ್ಲಿ ಸಿಖ್ಖರಿಗೆ ಪೇಟ ಅಥವಾ ಬಳೆ ಧರಿಸುವ ಹಕ್ಕಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ಹೋರಾಟವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್​ಗಾಂಧಿ ಹೇಳಿದ್ದರು.(ಏಜೆನ್ಸೀಸ್​​)