ನ್ಯೂಸ್

ಯೂ ಟೂಬ್​ನಿಂದ​ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಕೇಂದ್ರ ಸಚಿವ ನಿತಿನ್​ ಗಡ್ಕರಿ!

ಮುಂಬೈ: ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ್ದ ಕೆಲ ಮಹತ್ತರ ವಿಚಾರ ಇಲ್ಲಿದೆ.

ವಿಡಿಯೋ ಸರ್ಚಿಂಗ್​ ತಾಣ ಯೂ ಟೂಬ್​ನಿಂದ ನಿತಿನ್​ ಗಡ್ಕರಿ ಅವರಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆಯಂತೆ. ಈ ವಿಚಾರವನ್ನ ಸ್ವತಃ ನಿತಿನ್​ ಗಡ್ಕರಿ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಮದುವೆ ಆದ ಹೊಸತರಲ್ಲಿಯೇ ಪತ್ನಿಗೂ ತಿಳಿಯದಂತೆ ಮಾವನ ಮನೆಯನ್ನ ತೆರವು ಮಾಡಿಸಿದ್ದರಂತೆ!

ಕರೊನಾ ಲಾಕ್​ಡೌನ್​ ವೇಳೆ ತಾವು ಹೇಗೆ ಸಮಯ ಕಳೆದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ಆ ವೇಳೆ ಅಡುಗೆ ಮಾಡುವುದನ್ನ ಕಲಿತೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆ ವಿಡಿಯೋಗಳನ್ನು ಯೂಟೂಬ್​ಗೆ ಅಪ್​ಲೋಡ್​ ಮಾಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಿ ನನಗೀಗ ಯೂಟೂಬ್​ನಿಂದ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆ ಎಂದು ನಿತಿನ್​ ಗಡ್ಕರಿ ವಿವರಿಸಿದ್ದಾರೆ.

ಅದು ನಾನು ಮದುವೆ ಆದ ಆರಂಭದ ದಿನಗಳು. ನನ್ನ ಮಾವನ ಮನೆ ರಸ್ತೆ ಮಧ್ಯದಲ್ಲಿತ್ತು. ರಸ್ತೆ ಕಾಮಗಾರಿಗೆ ಈ ಮನೆ ಅಡ್ಡವಾಗಿದೆ, ಅದನ್ನು ತೆರವು ಮಾಡಬೇಕಿದೆ ಎಂದು ಅಧಿಕಾರಿಗಳು ನನಗೆ ಹೇಳಿದ್ರು. ನಾನು ಮಾವನ ಮನೆಯನ್ನ ಕೆಡವಲು ಅಧಿಕಾರಿಗಳಿಗೆ ಆದೇಶಿಸಿದೆ. ಈ ವಿಚಾರವನ್ನ ನಾನು ನನ್ನ ಪತ್ನಿಗೂ ಹೇಳಿರಲಿಲ್ಲ ಎಂದು ಹಳೇ ನೆನಪನ್ನೂ ಮೆಲುಕು ಹಾಕಿದ್ದಾರೆ.