ಸಾಂದರ್ಭಿಕ ಚಿತ್ರ 
ನ್ಯೂಸ್

ಕೇಂದ್ರದ ಮತ್ತೊಂದು ಪ್ರಮುಖ ನಿರ್ಧಾರ.. ಚಿನ್ನ, ಬೆಳ್ಳಿ ಆಭರಣ ಮೇಲಿನ ಡ್ರಾಬ್ಯಾಕ್ ದರ ಇಳಿಕೆ!

ಮುಂಬೈ: ಬಜೆಟ್ 2024-25 ರಲ್ಲಿ ಚಿನ್ನದ ಆಮದು ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಸರ್ಕಾರ ಈಗ ಚಿನ್ನ ಮತ್ತು ಬಂಗಾರದ ಆಭರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಆಭರಣಗಳ ರಫ್ತಿನ ಮೇಲಿನ ಡ್ರಾ ಬ್ಯಾಕ್ ದರವನ್ನು ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡಲಾಗುವುದು ಎಂದು ಘೋಷಿಸಿದೆ.

ಕೇಂದ್ರದ ಈ ತೀರ್ಮಾನದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆ ಕಾಣಲಿವೆ.

ಚಿನ್ನ, ಬೆಳ್ಳಿ ಅಕ್ರಮ ಸಾಗಣೆ ತಡೆಗೆ ಬಜೆಟ್ ನಲ್ಲಿ ಚಿನ್ನದ ಆಮದು ಮೇಲಿನ ಕಸ್ಟಮ್ಸ್ ಸುಂಕವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ತಿಳಿದ ಸಂಗತಿಯೇ. ಇದರಿಂದಾಗಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಆದರೆ, ಇದೀಗ ಚಿನ್ನ ಮತ್ತು ಬೆಳ್ಳಿ ಆಭರಣಗಳ ರಫ್ತಿನ ಮೇಲಿನ ಡ್ರಾಬ್ಯಾಕ್ ದರವನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸುವುದಾಗಿ ಕೇಂದ್ರ ಘೋಷಿಸಿದೆ. ಆಮದು ತೆರಿಗೆಯನ್ನು ಸರಿಹೊಂದಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಡ್ಯೂಟಿ ಡ್ರಾ ಬ್ಯಾಕ್ ನಿಂದ ರಫ್ತು ಮಾಡಲು ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಿಗೆ ಮರುಪಾವತಿ ಮಾಡಲಾಗುತ್ತದೆ. ಚಿನ್ನದ ಆಭರಣದಲ್ಲಿ ಪ್ರತಿ ಗ್ರಾಂ ನಿವ್ವಳ ಕಚ್ಚಾ ವಸ್ತುಗಳ ಡ್ರಾಡೌನ್ ದರವು ಅರ್ಧದಷ್ಟು ಇಳಿಕೆಯಾಗಲಿದೆ.

ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಆ.25 (ಭಾನುವಾರ) ಸ್ಥಿರವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಂ ಚಿನ್ನ 6,695 ರೂ. ಇದ್ದು, 24 ಕ್ಯಾರೆಟ್​ ಶುದ್ಧ ಚಿನ್ನ 10 ಗ್ರಾಂಗೆ 7,304ರೂ. ನಲ್ಲಿ ಮುಂದುವರಿಯುತ್ತದೆ. ಬೆಳ್ಳಿ ಬೆಲೆ 1ಕೆಜಿಗೆ 84,500 ರೂ.ಇದೆ ಎನ್ನಲಾಗಿದೆ.