ನ್ಯೂಸ್

Union Bugdet 2025| ಮಧ್ಯಮ ವರ್ಗದವರಿಗೆ ಗುಡ್​ನ್ಯೂಸ್​ ಕೊಟ್ಟ ನಿರ್ಮಲಾ ಸೀತಾರಾಮನ್​: 12 ಲಕ್ಷ ರೂ.ವರೆಗೂ ತೆರಿಗೆ ಇಲ್ಲ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ 2025-26ಬನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದು, ಮಧ್ಯಮವರ್ಗದವರಿಗೆ ಬಂಪರ್​ ಘೋಷಣೆಗಳನ್ನು ಮಾಡಿದ್ದಾರೆ. ವಿತ್ತ ಸಚಿವರ ಬಜೆಟ್ ಭಾಷಣದಲ್ಲಿ 12 ಲಕ್ಷ ಆದಾಯದವರೆಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ.

ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್‌ ಘೋಷಣೆ. 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ. ವೇತನ ಪಡೆಯುವ ತೆರಿಗೆದಾರರು 12  ಲಕ್ಷ ರೂ.ಗಳಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದ್ದಾರೆ.

₹12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ; ₹0–₹4ಲಕ್ಷ ತೆರಿಗೆ ಇಲ್ಲ, ₹4ಲಕ್ಷದಿಂದ ₹8ಲಕ್ಷವರೆಗೆ ಶೇ4, ₹8ಲಕ್ಷದಿಂದ ₹11ಲಕ್ಷ– ಶೇ 10, ₹12ಲಕ್ಷದಿಂದ ರಿಂದ ₹15ಲಕ್ಷ– ಶೇ 15, ₹ 16 ಲಕ್ಷದಿಂದ ₹20 ಲಕ್ಷವರೆಗೆ ಶೇ 20, ₹21ಲಕ್ಷದಿಂದ ₹24ಲಕ್ಷವರೆಗೆ ಶೇ 25ರಷ್ಟು ತೆರಿಗೆ ವಿಧಿಸಲಾಗುತ್ತದೆ.