Union Budget 2025: ಹಳೆಯ ರಾಷ್ಟ್ರೀಯ ಉಳಿತಾಯ ಯೋಜನೆ ಖಾತೆಗಳನ್ನು ಹೊಂದಿರುವ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು ತನ್ನ ದಾಖಲೆಯ ಎಂಟನೇ ಬಜೆಟ್ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಟಿಡಿಎಸ್(Tax Deducted at Source) ದರಗಳನ್ನು ಮತ್ತು ತೆರಿಗೆದಾರರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನೀಡಲಾಗುವುದು ಎಂದರು. ಹಿರಿಯ ನಾಗರಿಕರ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಈಗಿರುವ 50,000 ರೂ.ಗಳಿಂದ 1 ಲಕ್ಷಕ್ಕೆ ದ್ವಿಗುಣಗೊಳಿಸಲಾಗುತ್ತಿದೆ. ಬಾಡಿಗೆ ಮೇಲಿನ ಟಿಡಿಎಸ್ ಅನ್ನು 6 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಮಧ್ಯಮ ವರ್ಗದ ಉದ್ಯೋಗಿಗಳಿಗೆ ಬಿಗ್ ರಿಲೀಫ್, ಹೆಚ್ಚಿನ ಪ್ರೋತ್ಸಾಹ ಧನ, ಬಡ್ಡಿ ರಹಿತ ಸಾಲ! Budget 2025
ವೇತನ ಪಡೆಯುವ ತೆರಿಗೆದಾರರು 12 ಲಕ್ಷ ರೂ.ಗಳಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಣೆ ಮಾಡಿದ್ದಾರೆ.
12 ಲಕ್ಷದವರೆಗೂ ಆದಾಯ ತೆರಿಗೆ ಇಲ್ಲ; 0-4ಲಕ್ಷ ತೆರಿಗೆ ಇಲ್ಲ, 4ಲಕ್ಷದಿಂದ 8ಲಕ್ಷವರೆಗೆ ಶೇ4, 8ಲಕ್ಷದಿಂದ 11ಲಕ್ಷ- ಶೇ 10, 12ಲಕ್ಷದಿಂದ ರಿಂದ 15ಲಕ್ಷ- ಶೇ 15, 16 ಲಕ್ಷದಿಂದ 20 ಲಕ್ಷವರೆಗೆ ಶೇ 20, 21ಲಕ್ಷದಿಂದ 24ಲಕ್ಷವರೆಗೆ ಶೇ 25ರಷ್ಟು ತೆರಿಗೆ ವಿಧಿಸಲಾಗುತ್ತದೆ.(ಏಜೆನ್ಸೀಸ್)