ನ್ಯೂಸ್

Union Budget 2025; ರೈತರಿಗೆ ಲಾಭದಾಯಕ​ ಯೋಜನೆ ಘೋಷಿಸಿದ ಮೋದಿ ಸರ್ಕಾರ

ನವದೆಹಲಿ: ಮೋದಿ ಸರ್ಕಾರ 3.0 ಮೋದಿ ಸರ್ಕಾರ 3.0 ಅವಧಿಯ ಎರಡನೇ ಬಜೆಟ್​ಅನ್ನು (Budget) ಇಂದು (ಫೆಬ್ರವರಿ 01) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ ವಿರೋಧ ಪಕ್ಷಗಳ ಗದ್ದಲದ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ ಭಾಷಣವನ್ನು ಆರಂಭಿಸಿದ್ದಾರೆ.

ಈ ಬಜೆಟ್ (Budget) ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು, ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸಲು, ಖಾಸಗಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು, ದೇಶೀಯ ಸೂಕ್ಷ್ಮತೆಗಳನ್ನು ಬಲಪಡಿಸಲು ಮತ್ತು ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಧನಧಾನ್ಯ ಯೋಜನೆಯಡಿ ನೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ಯೋಜನೆ. ಕೃಷಿ ಉತ್ಪನ್ನಗಳ ಬೆಳವಣಿಗೆಗೆ ಆದ್ಯತೆ. ನೀರಾವರಿ, ಹಾಗೂ ಸ್ಟೋರೆಜ್ ಗಳ ನಿರ್ಮಾಣ. ಇದರಿಂದ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ತಮ್ಮ ಬಜೆಟ್​ ಭಾಷಣದಲ್ಲಿ ಘೋಷಿಸಿದ್ದಾರೆ.

ಬಜೆಟ್ ಸಾಧ್ಯತೆಗಳು

  • ಮೋದಿ ಗ್ಯಾರಂಟಿ ಯೋಜನೆಗಳ ಮುಂದುವರಿಕೆ.
  • ಅಸಂಘಟಿತ ಕ್ಷೇತ್ರದ ಕಾರ್ವಿುಕರಿಗೆ ನೆರವು.
  • ಮಧ್ಯಮವರ್ಗ, ರೈತರಿಗೆ ಪೂರಕ ಕ್ರಮಗಳು.
  • ರೈಲ್ವೆಯಲ್ಲಿ ನೇಮಕಾತಿಗಳಿಗೆ ಪೂರಕ ಹೆಜ್ಜೆ.
  • ರೈಲ್ವೆ ಸುಧಾರಣೆ, ಹೊಸ ಯೋಜನೆಗಳಿಗೆ ಅನುದಾನ.
  • ಮೂಲಸೌಕರ್ಯ ವಿಸ್ತರಣೆಗೆ ಒತ್ತು.