ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 1 ರಿಂದ ಆರಂಭವಾಗುವ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಅನ್ನು ಸಂಸತ್ತಿನಲ್ಲಿಂದು ಪ್ರಸ್ತುತ ಪಡಿಸಿದರು. ಹಣಕಾಸು ಸಚಿವೆಯಾಗಿ ಇದು ಅವರ ನಾಲ್ಕನೇ ಬಜೆಟ್ ಮಂಡನೆಯಾಗಿದೆ. ಕರೊನಾ ಅಲೆಗಳ ಹೊಡೆತದಿಂದ ಹಳಿತಪ್ಪಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಹೊಸ ಯೋಜನೆಗಳಿಗೆ ಹೆಚ್ಚು ಒತ್ತು ಕೊಡದೇ ಮೂಲಭೂತ ಸೌಕರ್ಯಗಳನ್ನು ಮೊದಲ ಆದ್ಯತೆಯನ್ನಾಗಿಸಿ ಮತ್ತು ಕೆಲವೊಂದು ವಿನಾಯಿಗಳನ್ನು ನೀಡುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಿದ್ದಾರೆ.
2022-2023ರ ಬಜೆಟ್ ಸಾರ್ವಜನಿಕ ಹೂಡಿಕೆಯ ಮೂಲಕ ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕುವುದರೊಂದಿಗೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಸಾಂಕ್ರಾಮಿಕ ಕುಸಿತದಿಂದ ಹೊರಬರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಯಾರಿಗೂ ಹೊರೆಯಾಗದ ಬಜೆಟ್ ಇದಾಗಿದ್ದು. ಕೃಷಿ, ಆಭರಣಗಳ ಮೇಲಿನ ಸುಂಕ ಇಳಿಸಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ನೇರ ಆದಾಯ ತೆರಿಗೆಯಲ್ಲೂ ಯಾವುದೇ ಏರಿಕೆ ಮಾಡಿಲ್ಲ. ಕೆಲ ವಸ್ತುಗಳ ಮೇಲಿನ ಸುಂಕ ಇಳಿಕೆಯಿಂದಾಗಿ ಬೆಲೆ ಇಳಿಕೆಯೂ ಆಗುವ ಸಾಧ್ಯತೆ ಇದೆ. ಅಲ್ಲದೆ, ದಿನ ನಿತ್ಯ ಬಳಸುವ ಕೆಲ ವಸ್ತಗಳ ಮೇಲೆಯು ತೆರಿಗೆ ಕಡಿತ ಮಾಡಲಾಗಿದೆ.
ಬಜೆಟ್ ಬಳಿಕ ಜನಸಾಮಾನ್ಯರಿಗೆ ಯಾವುದು ಅಗ್ಗ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ. ಅಗ್ಗ
ತುಟ್ಟಿ