ನ್ಯೂಸ್

ದೆಹಲಿಯ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ; ಕೇಂದ್ರ ಬಜೆಟ್​ ವಿರುದ್ಧ ಸಿಎಂ ಅರವಿಂದ ಕೇಜ್ರಿವಾಲ್​ ಅಸಮಾಧಾನ

ನವದೆಹಲಿ: ಕೇಂದ್ರ ಬಜೆಟ್​ ಮಂಡನೆಯಾದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಂಡನೆಯಾದ ಬಜೆಟ್​ನಲ್ಲಿ ದೆಹಲಿ ಬಗ್ಗೆ ಮಲತಾಯಿ ಧೋರಣೆ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಆದ್ಯತೆಗಳ ಪಟ್ಟಿಯಲ್ಲಿ ದೆಹಲಿ ಇಲ್ಲ ಎಂದಮೇಲೆ ಜನರು ಯಾಕೆ ಅವರಿಗೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರಸಕ್ತ ಕೇಂದ್ರ ಬಜೆಟ್​ ಬಗ್ಗೆ ದೆಹಲಿ ಬಹು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಮತ್ತೊಮ್ಮೆ ನಮ್ಮತ್ತ ಮಲತಾಯಿ ಧೋರಣೆ ತೋರಿಸಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆ ಪೂರ್ವದಲ್ಲಿಯೇ ದೆಹಲಿ ಜನರಿಗೆ ನಿರಾಸೆ ಮೂಡಿಸಿದ ಕೇಂದ್ರ ಸರ್ಕಾರ ಚುನಾವಣೆ ನಂತರ ತನ್ನ ಭರವಸೆಗಳನ್ನು ಈಡೇರಿಸುತ್ತದೆಯೇ ಎಂದು ಟೀಕಾತ್ಮಕವಾಗಿ ಪ್ರಶ್ನಿಸಿದ್ದಾರೆ.(ಪಿಟಿಐ)