ನ್ಯೂಸ್

ಕೇಂದ್ರ ಬಜೆಟ್​ 2020: ಲೋಕಪಾಲ ಸಂಸ್ಥೆಗೆ ಬಜೆಟ್​ನಲ್ಲಿ 74 ಕೋಟಿ ರೂ. ಹಂಚಿಕೆ

ಬೆಂಗಳೂರು: ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಲೋಕಪಾಲ ಸಂಸ್ಥೆಗೆ 74 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಆದರೆ ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ)ಕ್ಕೆ ಕೇವಲ ಅಲ್ಪ ಪ್ರಮಾಣ ಹಣ ನೀಡಿದೆ.

ಮುಂದಿನ ಹಣಕಾಸು ವರ್ಷಕ್ಕೆ ಲೋಕಪಾಲ್​ ಸಂಸ್ಥೆಗೆ ಒಟ್ಟು 74.7 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ ಭಾಷಣದಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಹಣದಲ್ಲಿ ಲೋಕಪಾಲ್​ ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಸಚಿವರು ಹೇಳಿದರು.

ಲೋಕಾಪಾಲರ ಕಚೇರಿ ಈಗ ಖಾಸಗಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದೆ. ಕೇಂದ್ರ ವಿಚಕ್ಷಣಾ ಆಯೋಗಕ್ಕೆ (ಸಿವಿಸಿ) ಈ ಬಾರಿ ಬಜೆಟ್​ನಲ್ಲಿ 39 ಕೋಟಿ ರೂಪಾಯಿ ನಿಗದಿ ಮಾಡಿದೆ. ಈ ಹಣದಲ್ಲಿ ಈ ವರ್ಷ ಸಿವಿಸಿ 36.65 ಕೋಟಿ ರೂಪಾಯಿ ಖರ್ಚು ಮಾಡಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. (ಏಜೆನ್ಸೀಸ್​)