ನ್ಯೂಸ್

ಶಾಹೀನ್​ ಭಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಅವಘಡ; ಪೊಲೀಸ್​ ಬಿಗಿ ಭದ್ರತೆ

ಕಳೆದ ಮೂರು ತಿಂಗಳಿನಿಂದಲೂ ದೆಹಲಿಯ ಶಾಹೀನ್ ಭಾಗ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇದೆ.

ಧರಣಿ ಕುಳಿತವರು ಕರೊನಾವನ್ನೂ ಲೆಕ್ಕಿಸದೆ ತಮ್ಮ ವಿರೋಧವನ್ನು ಮುಂದುವರಿಸುತ್ತಿದ್ದಾರೆ. ಇಂದು ಜನತಾ ಕರ್ಫ್ಯೂ ರಾಷ್ಟ್ರದೆಲ್ಲೆಡೆ ನಡೆಯುತ್ತಿದ್ದರೂ ಶಾಹೀನ್ ಬಾಗ್​ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಆದರೆ ಇಂದು ಇಲ್ಲಿ ಸಣ್ಣ ಅವಘಡವೊಂದು ನಡೆದಿದೆ.

ಮುಸುಕು ಧರಿಸಿ ಬೈಕ್​​ನಲ್ಲಿ ಬಂದ ದುಷ್ಕರ್ಮಿಗಳು ಧರಣಿ ಕುಳಿತವರ ಕಡೆಗೆ ರಾಸಾಯನಿಕವನ್ನು ಎರಚಿ ಪರಾರಿಯಾಗಿದ್ದಾರೆ. ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ.

ಬೈಕ್ ಚಾಲನೆ ಮಾಡುತ್ತಿದ್ದವನೇ ಗಾಜಿನ ಬಾಟಲಿಯಿಂದ ಕೆಮಿಕಲ್ಸ್​ನ್ನು ಪ್ರತಿಭಟನಾಕಾರರ ಕಡೆಗೆ ಎರಚಿದ್ದಾನೆ ಎನ್ನಲಾಗಿದೆ. ಕೇವಲ ಶಾಹೀನ್ ಬಾಗ್ ಮಾತ್ರವಲ್ಲದೆ, ಜಾಮಿಯಾ ಮಿಲಿಯಾ ಯೂನಿವರ್ಸಿಟಿಯ ಗೇಟ್ ನಂಬರ್ 7 ರ ಬಳಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದವರ ಮೇಲೆ ಕೂಡ ರಾಸಾಯನಿಕ ಸಿಂಪಡಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಪ್ರದೇಶಗಳಲ್ಲಿ ಇದ್ದ ಸಿಸಿಟಿವಿ ಕ್ಯಾಮರಾಗಳ ಫೂಟೇಜ್​​ಗಳನ್ನು ಪರಿಶೀಲನೆ ಮಾಡಲಾಗುವುದು. ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)