ನ್ಯೂಸ್

Video: ತಾನೇನು ಕಡಿಮೆ ಎಂದು ಟ್ರ್ಯಾಕ್​ಗೆ ನುಗ್ಗಿದ ಶ್ವಾನ: ಓಟಗಾರರ ನಡುವೆ ನಂಬರ್ 1 ಸ್ಥಾನ ಗಿಟ್ಟಿಸಿಯೇ ಬಿಟ್ಟಿತು!

ವಾಷಿಂಗ್ಟನ್: ಕೆಲವೊಮ್ಮೆ ಕ್ರೀಡೆಗಳಲ್ಲಿ ಯಾರೂ ನಿರೀಕ್ಷಿಸದ ಘಟನೆಗಳು ನಡೆದು ನಮ್ಮನ್ನೆಲ್ಲ ಬೆರಗುಗೊಳಿಸುತ್ತವೆ. ಆಗಾಗ ಇಂತಹ ಘಟನೆಗಳು ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅದರಲ್ಲಿ ಎಷ್ಟೋ ಘಟನೆಗಳು ನಮಗೆ ನಗು ತರಿಸುತ್ತವೆ.

ಇಂತಹದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿರುವುದು ಇದೀಗ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಅಮೆರಿಕದ ಯೂ ತಾ ರಾಜ್ಯದ ಲೊಗಾನ್ ಎಂಬಲ್ಲಿ ಹೈಸ್ಕೂಲ್ ಕ್ರೀಡಾಕೂಟಗಳು ಆಯೋಜನೆಗೊಂಡಿದ್ದವು. ಈ ವೇಳೆ ಅಥ್ಲೇಟಿಕ್ಸ್ ಕೂಡ ಆಯೋಜನೆಗೊಂಡಿದ್ದವು. ಎಂಟು ವಿದ್ಯಾರ್ಥಿನಿಯರು ಈ ವೇಳೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಓಡುತ್ತಿದ್ದರು. ಈ ವೇಳೆ ಏಕಾಏಕಿ ಪ್ಷೇಕ್ಷಕರ ಗ್ಯಾಲರಿಯಿಂದ ಟ್ರ್ಯಾಕ್​ಗೆ ನುಗ್ಗಿದ ನಾಯಿಯೊಂದು ನಂಬರ್ 1 ಸ್ಥಾನದಲ್ಲಿ ಓಡುತ್ತಿದ್ದ ವಿದ್ಯಾರ್ಥಿನಿಯನ್ನು ಗುರಿಯಾಗಿಸಿಕೊಂಡು ತಾನೂ ಸಹ ಓಡಲು ಶುರು ಮಾಡಿತು. ಕಡೆಗೆ ತಾನೇ ನಂಬರ್ 1 ಓಟಗಾರ್ತಿಯನ್ನು ಹಿಂದಿಕ್ಕಿ ವಿಜಯಶಾಲಿಯಾಗಿದೆ.

ವಿಶೇಷವೆಂದರೆ ಕ್ರೀಡಾಕೂಟದ ಆಯೋಜಕರು ಓಟದಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡ ವಿದ್ಯಾರ್ಥಿನಿಯ ಜೊತೆಗೆ ನಾಯಿಗೂ ಸ್ಮರಣಿಕೆ ನೀಡಿ ಸನ್ಮಾನ ಮಾಡಿದ್ದಾರಂತೆ.