ನ್ಯೂಸ್

ಈ ಫೋಟೋದಲ್ಲಿರುವುದು ಫ್ರೈಡ್​ ಚಿಕನ್​ ಪೀಸ್​ ಅಲ್ಲ...ಇದೊಂದು ವಿಸ್ಮಯ..!

ಈ ಫೋಟೋದಲ್ಲಿರುವುದನ್ನು ನೋಡಿದಾಗ ಮೇಲ್ನೋಟಕ್ಕೆ ಬ್ರೆಡ್​ ಕ್ರಸ್ಟೆಡ್​ ಫ್ರೈಡ್ ಚಿಕನ್​​ನ ದೊಡ್ಡ ತುಂಡಿನಂತೆ ಕಾಣುತ್ತದೆ. ಆದರೆ ನಿಜಕ್ಕೂ ಅದು ಚಿಕನ್ ಪೀಸ್​ ಅಲ್ವೇ ಅಲ್ಲ...ನಿಮ್ಮ ಊಹೆಗೂ ಮೀರಿದ ವಸ್ತು ಇದು...!

ಅಮೆರಿಕದ ಇಂಡಿಯಾನಾದಲ್ಲಿ ಅಮೆಲಿಯಾ ರೂಡ್​ ಎಂಬ ಮಹಿಳೆಗೆ ಈ ವಸ್ತು ಸಿಕ್ಕಿದೆ. ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡಿದ್ದಾರೆ. ನೆಟ್ಟಿಗರಂತೂ ಅದಕ್ಕೆ ಫ್ರೈಡ್​ ಚಿಕನ್​ ಪೀಸ್​ ಎಂದೇ ಕರೆದಿದ್ದಾರೆ.

ಆದರೆ ಇದು ಒಂದು ಬಗೆಯ ಹರಳು. ಕತ್ತರಿಸಿ, ಸಂಸ್ಕರಣೆ ಮಾಡದ ರೀತಿಯಲ್ಲಿ ಇರುವ ಸ್ಫಟಿಕ. ಅಮೆಲಿಯಾ ಅವರು ಇಂಡಿಯಾನಾದಲ್ಲಿ ತಮ್ಮ ಪ್ರಿಯತಮನೊಂದಿಗೆ ಸೇರಿ ಹರಳು, ರತ್ನಗಳ ವ್ಯಾಪಾರ ನಡೆಸುತ್ತಾರೆ. ಗ್ರಾಹಕರಿಗೆ ಬೇಕಾದ ಮಾದರಿಯ ಒಡವೆಗಳನ್ನು ತಯಾರಿಸಿಕೊಡುತ್ತಾರೆ. ಅವರಿಗೆ ಸಿಕ್ಕ ಹೊಸಬಗೆಯ ಹರಳುಗಳ ಗುಚ್ಛ ಇದು. ಇದನ್ನೂ ಓದಿ: ಪ್ರಮುಖ ಐಪಿಎಸ್​ ಅಧಿಕಾರಿ, ಅವರ ಪತ್ನಿಯಿಂದ ದೌರ್ಜನ್ಯ; ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿದ ಮಹಿಳೆ

ಕಳೆದ ಒಂದು ವರ್ಷಗಳಿಂದಲೂ ಸುಮಾರು 700 ಬಗೆಯ ಹರಳುಗಳನ್ನು ಸಂಗ್ರಹಿಸಿದ್ದೇನೆ. ಆದರೆ ಇದು ತುಂಬ ವಿಭಿನ್ನವಾದ ಹರಳು ಗುಚ್ಛ ಎನ್ನುತ್ತಾರೆ ಅಮೇಲಿಯಾ. ಅಷ್ಟೇ ಅಲ್ಲ, ಈ ಹಿಂದೆ ತಾನೂ ಕೂಡ ಇಂಥ ಮಾದರಿಯ ಸ್ವಚ್ಛ ಹರಳುಗಳನ್ನು ನೋಡಿರಲಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)