ಸಾಲಿಗ್ರಾಮ ತಾಲೂಕು ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವೈ.ಎಸ್.ನಟರಾಜು ಅವರನ್ನು ಉಪಾಧ್ಯಕ್ಷ ಸಿ.ಎಚ್.ಕುಮಾರ್ ಮತ್ತು ನಿರ್ದೇಶಕರು ಅಭಿನಂದಿಸಿದರು. ಸಿ.ಎಚ್. ಕುಮಾರ್, ಸಿ.ವೈ.ಅಭಿಲಾಷ್, ಉಷಾ, ಚೆಲುವಯ್ಯ, ತಮ್ಮೇಗೌಡ, ಸಿ.ಕೆ. ಮಲ್ಲಿಕಾರ್ಜುನ, ಎಂ.ಎಸ್. ಪುಟ್ಟೇಗೌಡ, ರೂಪಾ ಶಂಕರ್ ನಾಯಕ ಇತರರಿದ್ದರು. 
ನ್ಯೂಸ್

ಚನ್ನಂಗೆರೆ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಸಾಲಿಗ್ರಾಮ: ತಾಲೂಕಿನ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯರೆಮನುಗನಹಳ್ಳಿ ವೈ.ಎಸ್.ನಟರಾಜು ಅವಿರೋಧವಾಗಿ ಆಯ್ಕೆಯಾರು.

ಈವರೆಗೆ ಅಧ್ಯಕ್ಷರಾಗಿದ್ದ ಸಿ.ಕೆ.ಜಗದೀಶ್ ಅವರ ನಿಧನದಿಂದ ತೆರನಾಗಿದ್ದ ಸ್ಥಾನಕ್ಕೆ ಸಂಘದ ಆಡಳಿತ ಕಚೇರಿಯಲ್ಲಿ ಗುರುವಾರ ಚುನಾವಣೆ ನಡೆಯಿತು. ವೈ.ಎಸ್. ನಟರಾಜು ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ರವಿ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಸಂಘದ ಉಪಾಧ್ಯಕ್ಷ ಸಿ.ಎಚ್. ಕುಮಾರ್, ನಿರ್ದೇಶಕರಾದ ಸಿ.ವೈ.ಅಭಿಲಾಷ್, ಉಷಾ, ಚೆಲುವಯ್ಯ, ತಮ್ಮೇಗೌಡ, ಸಿ.ಕೆ. ಮಲ್ಲಿಕಾರ್ಜುನ, ಎಂ.ಎಸ್. ಪುಟ್ಟೇಗೌಡ, ರೂಪಾ ಶಂಕರ್ ನಾಯಕ, ಸೈಯದ್ ಇಸ್ರಾರ್, ಜಿಲ್ಲಾ ಬ್ಯಾಂಕ್‌ನ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಒ ಆರ್.ಮಂಜು, ಸಹಾಯಕರಾದ ಎಚ್.ಪಿ.ರಾಜೇಶ್, ಧನಲಕ್ಷ್ಮಿ ಮತ್ತಿತರರಿದ್ದರು.

ನೂತನ ಅಧ್ಯಕ್ಷರನ್ನು ಚನ್ನಂಗೆರೆ ಗ್ರಾಪಂನ ಮಾಜಿ ಅಧ್ಯಕ್ಷೆ ಸುಕನ್ಯಾ ನಾಗರಾಜು, ಹನಸೋಗೆ ಗ್ರಾಪಂ ಅಧ್ಯಕ್ಷ ಎಚ್.ಆರ್.ಹರೀಶ್, ಮಾಜಿ ಅಧ್ಯಕ್ಷ ಎಚ್.ಟಿ.ರಾಜೇಶ್, ಸಿ.ಎನ್.ನಾರಾಯಣಗೌಡ, ಸಂಘದ ಮಾಜಿ ನಿರ್ದೇಶಕ ಸಿ.ಎಸ್.ನಾಗರಾಜು, ಮುಖಂಡರಾದ ಬಾಪು, ಸಿ.ಎಸ್.ರಮೇಶ್, ಮಹದೇವ್, ಸುಂದರ್, ಸುರೇಶ್, ಧರ್ಮೇಗೌಡ ಮತ್ತಿತರರು ಅಭಿನಂದಿಸಿದರು.