ನ್ಯೂಸ್

ಅನಾರೋಗ್ಯದಿಂದ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿಲ್ಲ: ದೇವೇಗೌಡ

ಬೆಂಗಳೂರು: ಅನಾರೋಗ್ಯದದಿಂದ ಸೋಮವಾರ ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಮಹತ್ವದ ಸಭೆಯನ್ನು ಇಂದೇ ಆಯೋಜಿಸಲಾಗಿತ್ತು. ಸೊಂಟದ ನೋವಿನ ಕಾರಣ ಆ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ. ಹತ್ತು ನಿಮಿಷವಷ್ಟೇ ಆ ಸಭೆಗೆ ಹಾಜರಾಗಿ ನಂತರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುವುದಾಗಿ ದೇವೇಗೌಡ ತಿಳಿಸಿದ್ದಾರೆ.