Drone Attack: ಯುಕ್ರೇನ್‌ನ ದೇಶೀಯ ಭದ್ರತಾ ಸಂಸ್ಥೆಯಾದ ಎಸ್‌ಬಿಯು, ಇಂದು (ಜೂ.1) ಭಾನುವಾರದಂದು ರಷ್ಯಾ ವಿರುದ್ಧ ಬೃಹತ್ ಡ್ರೋನ್ ದಾಳಿ ನಡೆಸಿ, ರಷ್ಯಾದ 40 ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಜೂನ್ 3 ರವರೆಗೆ ಬಿರುಸಿನ ಮಳೆ; ಈ ರಾಜ್ಯದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ | Weather Forecast
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಮಿಲಿಟರಿ ವಿಮಾನಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ತೋರಿಸಲಾಗಿದ್ದು, ಅವು ರಷ್ಯಾದ Tu-95 ಹೆವಿ ಬಾಂಬರ್‌ಗಳಾಗಿದ್ದು, ಉಕ್ರೇನಿಯನ್ ಡ್ರೋನ್ ದಾಳಿಯಿಂದಾಗಿ ಅವು ಸುಟ್ಟುಹೋಗಿವೆ ಎಂದು ಆರೋಪಿಸಲಾಗಿದೆ.
ಯುಕ್ರೇನಿಯನ್ ಡ್ರೋನ್‌ಗಳು ಈ ಪ್ರದೇಶದ ಮೇಲೆ ದಾಳಿ ಮಾಡಿವೆ ಎಂದು ರಷ್ಯಾದ ಮುರ್ಮನ್ಸ್ಕ್ ಗವರ್ನರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯ ಪ್ರತ್ಯೇಕ ವರದಿ ತಿಳಿಸಿದೆ.(ಏಜೆನ್ಸೀಸ್)