ಉಕ್ರೇನ್: ರಷ್ಯಾ ನಿಯಂತ್ರಣದಲ್ಲಿರುವ ದಕ್ಷಿಣ ಉಕ್ರೇನ್‌ನ ಪ್ರಮುಖ ಅಣೆಕಟ್ಟು ಮತ್ತು ಜಲವಿದ್ಯುತ್ ಕೇಂದ್ರವಾದ ನೋವಾ ಕಾಖೋವ್ಕಾ ಅಣೆಕಟ್ಟನ್ನು ರಷ್ಯಾದ ಪಡೆಗಳು ಸ್ಫೋಟಿಸಿದೆ ಎಂದು ಉಕ್ರೇನ್ ಆರೋಪಿಸಿದೆ.
ಈ ಆಣೆಕಟ್ಟಿನ ನಾಶವು ಯುರೋಪಿನ ಅತಿದೊಡ್ಡ ತಾಂತ್ರಿಕ ವಿಪತ್ತಾಗಿದ್ದು, ಇದೊಂದು ಘೋರ ಯುದ್ಧ ಅಪರಾಧ ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.
ಈ ಆಣೆಕಟ್ಟಿನ ವಿನಾಶದಿಂದಾಗಿ ಉಕ್ರೇನ್ ತೀವ್ರವಾದ ಪರಿಣಾಮಗಳನ್ನು ಎದುರಿಸಲಿದೆ. ಆಣೆಕಟ್ಟಿನ ಕೆಳಭಾಗದ ಪ್ರದೇಶಲ್ಲಿರುವ ಸಾವಿರಾರು ಜನರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳಲಿವೆ. ಹಾಗೂ ರಷ್ಯಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾದ ದಕ್ಷಿಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್)