ನ್ಯೂಸ್

ಉಕ್ಕುಂದ ಸರ್ಕಾರಿ ಶಾಲೆ ಖೋ ಖೋ ಕ್ರೀಡಾಕೂಟದಲ್ಲಿ ಪ್ರಥಮ

ರಾಣೆಬೆನ್ನೂರ: ತಾಲೂಕಿನ ಕಾಕೋಳ ಮಂಡಲ ಮಟ್ಟದ ಕ್ರೀಡಾಕೂಟದಲ್ಲಿ ಉಕ್ಕುಂದ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾಥಿರ್ಗಳು ಖೋಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಮುಖ್ಯಶಿಕ್ಷಕ ಕುಬೇಂದ್ರ ನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಮಂಜನಗೌಡ ಪಾಟೀಲ, ಸಹ ಶಿಕ್ಷಕರಾದ ಜೆ.ಎಂ. ಕಾಮಾಕ್ಷಿ, ಸುನಿಲ ಬಿ.ಎಲ್​., ಪ್ರದಿದ ಕುಮಾರ, ಮಂಜನಗೌಡ ಬೇಳಕೇರಿ, ಮಮ್ತಾಜಿಬಿ ನದಾಫ್​ ಹಾಗೂ ಸಹಾಯಕ ದ್ವಾರಕಸ್ವಾಮಿ ಹೀರೇಮಠ ಮತ್ತು ಕೋಚರ್​ಗಳಾದ ಹುಸೇನಸಾಬ ಕಳ್ಳಿಮನಿ, ಮಂಜು ಮಡಿವಾಳರ ಇವರ ಮಾರ್ಗದರ್ಶನದಲ್ಲಿ ಮಾಡಿದ್ದರು.