ನ್ಯೂಸ್

ತನ್ನನ್ನು ತಾನೇ ಮದುವೆಯಾದ ಮಹಿಳೆ; 40 ವರ್ಷ ಕಾದ್ರೂ ಮಿಸ್ಟರ್​ ರೈಟ್ ಪರ್ಸನ್​​ ಸಿಗಲೇ ಇಲ್ಲ...!

ಲಂಡನ್​: ತನ್ನನ್ನು ತಾನೇ ಮದುವೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಲಂಡನ್​ನ ಮಹಿಳೆಯೊಬ್ಬಳು ತನ್ನನ್ನು ತಾನೇ ಮದುವೆಯಾಗಿದ್ದಾಳೆ. ಆದರೆ ಮಹಿಳೆಯ ಈ ನಿರ್ಧಾರದ ಹಿಂದೆ ಇದೆ ವಿಚಿತ್ರ ಕಾರಣ. ಬನ್ನಿ ಈಕೆ ಹೀಗೆ ಮಾಡಲು ಕಾರಣವೇನು ಎಂದು ತಿಳಿಯೋಣ...

ಲಂಡನ್​ನ ನಿವಾಸಿಯಾಗಿರುವ ಸಾರಾ ವಿಲ್ಕಿನ್ಸನ್​ ಎನ್ನುವ ಮಹಿಳೆಯೊಬ್ಬಳು ಸರಿಯಾದ ಜೀವನ ಸಂಗಾತಿಗಾಗಿ ವಯಸ್ಸು 42 ಕಾಯ್ದು ಬೇಸರಗೊಂಡಿದ್ದಳು. ಕೊನೆಗೆ ತನ್ನನ್ನು ತಾನೇ ಮದುವೆಯಾಗುವ ನಿರ್ಧಾರಕ್ಕೆ ಬಂದು ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮಖದಲ್ಲಿ ವಿವಾಹವಾದಳು . ಈ ಮದುವೆಗಾಗಿ ರೂ. 10 ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಸೆಪ್ಟೆಂಬರ್ 30 ರಂದು ನಡೆದ ಸಮಾರಂಭದಲ್ಲಿ ಸಾರಾ​ಳ 40 ಆತ್ಮೀಯ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ್ದರು.

ಗಮನ ಸೆಳೆದ ಮದುವೆ: ತನ್ನನ್ನು ತಾನೇ ಮದುವೆಯಾಗಬೇಕೆಂದು ನಿರ್ಧರಿಸಿದಾಗ ಸಾರಾ​ ನಿಶ್ಚಿತಾರ್ಥಕ್ಕಾಗಿ ಉಂಗುರ ಖರೀದಿಸಿದಳು. ನಂತರ ಮದುವೆಯ ತಯಾರಿ ನಡೆಸಿದಳು. ಬಿಳಿ ಗೌನ್ ಧರಿಸಿ ಸ್ಥಳಕ್ಕೆ ಬಂದು ಕೇಕ್ ಕಟ್​​ ಮಾಡಿದ್ದಾಳೆ. ಸಫೊಲ್ಕ್‌ನ ಫೆಲಿಕ್ಸ್‌ಸ್ಟೋವ್‌ನಲ್ಲಿರುವ ಹಾರ್ವೆಸ್ಟ್ ಹೌಸ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಮದುವೆ ಎನ್ನುವ ವಿಶೇಷ ದಿನವನ್ನು ಆಚರಿಸಿಕೊಂಡಳು.

ಸಾರಾಹ್ ಮಾತನಾಡಿ​, ‘ತಾನು ಹೀಗೆ ಎಲ್ಲರ ಗಮನ ಸೆಳೆದು ಕೇಂದ್ರಬಿಂದುವಾಗಿರಲು ಈ ದಿನ ಅತ್ಯಂತ ಸೂಕ್ತ ಮತ್ತು ಸುಂದರವಾದ ದಿನ.ಈ ಸಮಾರಂಭವು ಅಧಿಕೃತ ವಿವಾಹವಾಗಿರಲಿಲ್ಲ, ಆದರೆ ನನ್ನ ಮದುವೆಯ ದಿನವಾಗಿತ್ತು. ನನ್ನ ಪಕ್ಕದಲ್ಲಿ ನನ್ನ ಸಂಗಾತಿ ಇರಲಿಲ್ಲ ನಿಜ. ಆದರೆ ನಾನ್ಯಾಕೆ ಮದುವೆಯ ಅವಕಾಶವನ್ನು ತಪ್ಪಿಸಿಕೊಳ್ಳಬೇಕು? ಅದಕ್ಕಾಗಿಯೆಂದೇ ಹಣವನ್ನು ಕೂಡಿಟ್ಟಿದ್ದೆ. ಯಾವುದಕ್ಕೆ ಕೂಡಿಟ್ಟಿದ್ದೆನೋ ಅದಕ್ಕಾಗಿ ಆ ಹಣ ವಿನಿಯೋಗಿಸಿದೆ’ ಎಂದಿದ್ದಾಳೆ.