UK student sells her virginity: ವಿದ್ಯಾರ್ಥಿನಿಯೊಬ್ಬಳು ತನ್ನ ಕನ್ಯತ್ವವನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕಿ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದೆ.
22 ವರ್ಷದ ಲಾರಾ ತನ್ನ ಕನ್ಯತ್ವವನ್ನು ಎಸ್ಕಾರ್ಟ್ ಏಜೆನ್ಸಿಯ ವೇದಿಕೆಯ ಮೂಲಕ ಆನ್‌ಲೈನ್‌ನಲ್ಲಿ ಹರಾಜಿಗಿಟ್ಟಳು. ಎಸ್ಕಾರ್ಟ್ ಏಜೆನ್ಸಿ ಎಂದರೆ ವೇಶ್ಯಾವಾಟಿಕೆಗೆ ಸಭ್ಯ ಹೆಸರು ಅಷ್ಟೆ. ಈ ಹರಾಜಿನಲ್ಲಿ ರಾಜಕಾರಣಿಗಳು, ವ್ಯಾಪಾರ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಕೊನೆಯಲ್ಲಿ ಈಕೆಯ ಬಿಡ್ ಅನ್ನು ಗೆದ್ದುಕೊಂಡವನು ಒಬ್ಬ ಹಾಲಿವುಡ್ ತಾರೆಯಂತೆ. ಕನ್ಯತ್ವವನ್ನು 1.7 ಮಿಲಿಯ ಡಾಲರ್ (ಸುಮಾರು 18 ಕೋಟಿ ರೂಪಾಯಿ) ಕೊಟ್ಟು ಖರೀದಿಸಿದ್ದಾನೆ. ಈಕೆ ಖರೀದಿದಾರರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ತನ್ನ ಕನ್ಯತ್ವವನ್ನು ದೃಢಪಡಿಸಿದಳು. ಹಾಲಿವುಡ್ ನಟನಿಗೆ ತನ್ನ ಕನ್ಯತ್ವವನ್ನು ಮಾರಾಟ ಮಾಡಿದ ನಂತರ ಲಾರಾ ತನ್ನ ವಿವಾದಾತ್ಮಕ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದಳು.
ಲಾರಾ ಮಾತನಾಡಿ, “ನನಗೆ ವಿಷಾದವಿಲ್ಲ. ಹೆಚ್ಚಿನ ಎಲ್ಲ ಹುಡುಗಿಯರು ಪ್ರತಿಯಾಗಿ ಏನನ್ನೂ ಪಡೆಯದೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ನಾನು ಕನಿಷ್ಠ ಅದರ ಮೂಲಕ ನನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಿದೆ. ನಾನು ಯಾರಿಗೆ ಕನ್ಯತ್ವವನ್ನು ಕಳೆದುಕೊಳ್ಳಲಿದ್ದೇನೋ ಆತ ನನ್ನ ಶಾಶ್ವತ ಸಂಗಾತಿಯಾಗುವ ಸಾಧ್ಯತೆಯೇನೂ ಇಲ್ಲ. ಹೀಗಾಗಿ ಇದು ಜೀವಮಾನದ ಒಪ್ಪಂದವಲ್ಲ. ನಾನು ಈ ವಿಷಯದಲ್ಲಿ ತರ್ಕಬದ್ಧ ವ್ಯಕ್ತಿ. ಭಾವನೆಗಳಿಗೆ ತುತ್ತಾಗುವವಳಲ್ಲ. ನನ್ನ ನಿರ್ಧಾರಕ್ಕೆ ಬದ್ಧಳಾಗಿದ್ದೇನೆ. ನನಗೆ ಯಾವುದೇ ವಿಷಾದವಿಲ್ಲ" ಎಂದಿದ್ದಾಳೆ.
ಕೆಲ ತಿಂಗಳುಗಳ ಹಿಂದೆ ಈ ಸ್ಪರ್ಧಾತ್ಮಕ ಹರಾಜು ನಡೆಯುವ ಮೊದಲು ಸಂಭಾವ್ಯ ಬಿಡ್‌ದಾರರನ್ನು ಭೇಟಿ ಮಾಡಲು ಆಕೆ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ಹಾಜರಾಗಿದ್ದಳು. ಹರಾಜಿನ ನಂತರ ಜೆಫ್ರಿ ಎಪ್ಸ್ಟೀನ್‌ನ ಖಾಸಗಿ ದ್ವೀಪಕ್ಕೆ ಭೇಟಿ ನೀಡಿದ್ದಳು. ಅಲ್ಲಿ ಆ ಶ್ರೀಮಂತ ನಟನೊಂದಿಗೆ ರಾತ್ರಿ ಕಳೆದಳು. ನಂತರ ಇದೀಗ ಲಾರಾ ಶುಗರ್ ಬೇಬಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದಾಳೆ. ತನ್ನ ಕಂಪನಿಗಾಗಿ ತಿಂಗಳಿಗೆ 30,000 ಡಾಲರ್ ಪಾವತಿಸಲು ಸಿದ್ಧರಿರುವ ಶ್ರೀಮಂತ ದಾನಿ, ಲೈಂಗಿಕ ಆಸಕ್ತರನ್ನು ಹುಡುಕುತ್ತಿದ್ದಾಳೆ.