ನ್ಯೂಸ್

ಸುನಕ್​ರನ್ನು ಕಿಡ್ನಾಪ್ ಮಾಡಿ ಕೊಹಿನೂರ್​ ಕದಿಯುವ ಮಾಸ್ಟರ್​ಪ್ಲಾನ್​ ವೈರಲ್​!

ನವದೆಹಲಿ: ರಿಷಿ ಸುನಕ್ ಪ್ರಧಾನಿಯಾದ ಕ್ಷಣದಿಂದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ​ಗಳನ್ನು ಹರಿ ಬಿಡುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಭೂಪ ರಿಷಿ ಸುನಕ್​ ಮೂಲಕ ಕೊಹಿನೂರ್​ ವಜ್ರವನ್ನು ಭಾರತಕ್ಕೆ ಹೇಗೆ ತರಬೇಕು ಎಂದು ಮಾಸ್ಟರ್​ಪ್ಲಾನ್​ ಮಾಡಿದ್ದಾನೆ!

ಹರ್ಷ ಗೋಯೆಂಕಾ ಎನ್ನುವವರು ತಮ್ಮ ಗೆಳೆಯನ ನಾಲ್ಕು ಹಂತದ ಪ್ಲಾನ್​ ಒಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 'ರಿಷಿ ಸುನಕ್​ರನ್ನು ಭಾರತಕ್ಕೆ ಆಹ್ವಾನಿಸುವುದು. ತಮ್ಮ ಮಾವನ ಮನೆಗೆ ಹೋಗುವಾಗ ಅವರನ್ನು ಬೆಂಗಳೂರು ಟ್ರಾಫಿಕ್​ನಲ್ಲಿ ಕಿಡ್ನಾಪ್​ ಮಾಡುವುದು. ನಂತರ ಬ್ರಿಟನ್​ ಪ್ರಧಾನಿಯನ್ನೇ ಹೋಲುವ ಆಶೀಶ್ ನೆಹ್ರಾರನ್ನು ಸುನಕ್​ ಬದಲಾಗಿ ಕಳುಹಿಸಿ ಕೊಹಿನೂರ್ ಹಿಂತಿರುಗಿಸುವ ಬಿಲ್​ ಪಾಸ್ ಮಾಡಿಸುವುದು' ಎಂದು ಟ್ವೀಟ್​ ಮಾಡಿದ್ದಾರೆ.

ಕೆಲವರು ರಿಷಿ ಸುನಕ್​ರನ್ನೇ ಹೋಲುವ ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಆಶಿಶ್ ನೆಹ್ರಾಗೆ ಅಭಿನಂದಿಸದ್ದಾರೆ. ಇನ್ನೂ ಕೆಲವರು ಭಾರತವನ್ನು ಆಳಿದ್ದ ಬ್ರಿಟೀಷರನ್ನು ಇಂದು ಭಾರತೀಯ ಆಳುತ್ತಿದ್ದಾನೆ ಎಂದು ಕಾಲೆಳೆದಿದ್ದಾರೆ.

ಇದೀಗ ಹರ್ಷ ಗೋಯೆಂಕಾ ಅವರ ಟ್ವೀಟ್​ ಭಾರಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರಂತೂ 'ಸುನಕ್​ ಟ್ರಾಫಿಕ್​ನಲ್ಲಿ ಸಿಲುಕಿದ್ದಾಗಲೇ ನೆಹ್ರಾರನ್ನು ಕಳುಹಿಸಿ ಬಿಲ್ ಪಾಸ್​ ಮಾಡಿಸಬಹುದು' ಎಂದಿದ್ದಾರೆ.