ನ್ಯೂಸ್

16 ವರ್ಷಗಳ ನಂತರ ಭಾರತದಲ್ಲಿದ್ದ ತನ್ನ ಬಾಲ್ಯದ ಮನೆಗೆ ಭೇಟಿ ಕೊಟ್ಟ UK ವ್ಯಕ್ತಿ:ಮುಂದೇನಾಯ್ತು?Video Viral

UK Man: ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ (Video Viral) ಆಗುವ ವಿಷಯ ಒಂದೆರಡಲ್ಲ. ಹೊಸ ಹೊಸ ಪ್ರತಿಭೆಗಳು, ಇದುವೆರಗೂ ತಿಳಿಯದ ಹಲವಾರು ವಿಷಯಗಳು ವೈರಲ್​ ಆಗುವುದು ಸೋಶಿಯಲ್​​ ಮೀಡಿಯಾದಲ್ಲೆ. ಹಾಗೆಯೇ ಇಲ್ಲೊಬ್ಬ ವಿದೇಶಿ ಹುಡುಗ 16 ವರ್ಷಗಳ ನಂತರ ಭಾರತದಲ್ಲಿ ತನ್ನ ಬಾಲ್ಯದ ಮನೆಗೆ ಭೇಟಿ ನೀಡಿ ಕಣ್ಣೀರು ಹಾಕಿರುವ ವಿಡಿಯೋ ಸಖತ್​​ ವೈರಲ್​​ ಆಗಿದೆ.

ಲಂಡನ್ ಮೂಲದ ಕಂಟೆಂಟ್​​ ಕ್ರಿಯೇಟರ್​​​ ರಾಫ್ ಲೆಂಗ್ ತನ್ನ ಬಾಲ್ಯ ಜೀವನವನ್ನು ಭಾರತದಲ್ಲಿಯೇ ಕಳೆದಿದ್ದನು. ಹಾಗಾಗಿ ಅವನು 16 ವರ್ಷಗಳ ನಂತರ ತಾನಿದ್ದ ಬಾಲ್ಯದ ಮನೆಗೆ ಭೇಟಿ ಕೊಟ್ಟಾಗ ಅವನಿಗಾದ ಅನುಭವಗಳನ್ನು ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ "ನಾನು ಭಾರತವನ್ನು ಪ್ರೀತಿಸುತ್ತೇನೆ" ಎಂದು ಕ್ಯಾಪ್ಶನ್​​ ಕೊಟ್ಟು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಲ್ಲಿದೆ ವಿಡಿಯೋ

ರಾಫ್ ಲೆಂಗ್ ಹಂಚಿಕೊಂಡ ಈ ವಿಡಿಯೋಕ್ಕೆ ಬಳಕೆದಾರರ ಪ್ರತಿಕ್ರಿಯೆ ಜೋರಾಗಿದೆ. ಒಬ್ಬ ನೆಟ್ಟಿಗ, "ಈ ವಿಡಿಯೋ ನಮಗೆ ನಿಮ್ಮೊಂದಿಗೆ ತುಂಬಾ ಸಂಬಂಧ ಹೊಂದಿದೆ ಎಂದು ತಿಳಿಸುತ್ತದೆ" ಎಂದರೆ, ಮತ್ತೊಬ್ಬ ಬಳಕೆದಾರರು, "ನೀವು ನನ್ನನ್ನೂ ನಿಮ್ಮೊಂದಿಗೆ ಅಳುವಂತೆ ಮಾಡಿದ್ದೀರಿ. ನಾನು ಕೂಡ ದೆಹಲಿಯ ಜನಕಪುರಿಯಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿ ಬೆಳೆದೆ ಮತ್ತು ಈಗ ನಾನು ರಾಜಸ್ಥಾನದ ಜೈಪುರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಅಜ್ಜಿಯ ಮನೆಯನ್ನು ನೆನಪಿಸಿಕೊಳ್ಳದ ಒಂದು ದಿನವೂ ಇಲ್ಲ" ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)