ನ್ಯೂಸ್

ಪ್ಯಾಲೆಸ್ಟೈನ್ ಒಂದು ರಾಷ್ಟ್ರ ಎಂದು ಗುರುತಿಸಿದ UK, ಕೆನಡಾ, ಆಸ್ಟ್ರೇಲಿಯಾ: ಕೆಂಡಕಾರಿದ ಇಸ್ರೇಲ್​, US!

ಅಮೆರಿಕ ವಿರೋಧದ ಹೊರತಾಗಿಯೂ, ಕೆನಡಾ, ಯುಕೆ(UK) ಮತ್ತು ಆಸ್ಟ್ರೇಲಿಯಾ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಔಪಚಾರಿಕವಾಗಿ ಭಾನುವಾರ(ಸೆ.21) ಗುರುತಿಸಿದೆ.

ಈ ಕುರಿತು ಮೂರು ರಾಷ್ಟ್ರಗಳು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಘೋಷಿಸಿವೆ. ಅಕ್ಕಪಕ್ಕದಲ್ಲಿ ವಾಸಿಸುವ ಎರಡು ರಾಜ್ಯಗಳ ಆಧಾರದ ಮೇಲೆ ಶಾಂತಿಗೆ ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಪ್ಯಾಲೆಸ್ಟೀನಿಯನ್ ರಾಷ್ಟ್ರವನ್ನು ಗುರುತಿಸಲಾಗಿದೆ ಎಂದು ತಿಳಿಸಿದೆ.

ಈ ವಾರ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಗುರುತಿಸುವ ದೇಶಗಳು ಎರಡು-ರಾಜ್ಯ ಪರಿಹಾರವನ್ನು ಸಂರಕ್ಷಿಸುವ ಮತ್ತು ಪ್ಯಾಲೆಸ್ಟೀನಿಯನ್ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಹತ್ತಿರಕ್ಕೆ ತರುವ ಬದಲಾಯಿಸಲಾಗದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿವೆ ಎಂದು ಪ್ಯಾಲೆಸ್ಟೀನಿಯನ್ ವಿದೇಶಾಂಗ ಸಚಿವ ವರ್ಸೆನ್ ಅಘಾಬೆಕಿಯನ್ ಶಾಹಿನ್ ಹೇಳಿದ್ದಾರೆ.

"ಇದು ನಮ್ಮನ್ನು ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯಕ್ಕೆ ಹತ್ತಿರ ತರುವ ಒಂದು ನಡೆಯಾಗಿದೆ. ಇದು ನಾಳೆ ಯುದ್ಧವನ್ನು ಕೊನೆಗೊಳಿಸದಿರಬಹುದು. ಆದರೆ, ಇದು ಒಂದು ಮುಂದುವರಿಕೆಯ ದೊಡ್ಡ ಹೆಜ್ಜೆಯಾಗಿದೆ ಎಂದು ಗಾಜಾದಲ್ಲಿ ಇಸ್ರೇಲ್‌ನ ಸುಮಾರು ಎರಡು ವರ್ಷಗಳ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸುತ್ತಾ ಹೇಳಿದರು.

ಕೆಂಡಮಂಡಲವಾದ ಇಸ್ರೇಲ್​, ಯುಎಸ್​ಎ

ಇದೇ ತಿಂಗಳ ಕೆಲ ದಿನಗಳಿಂದ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಂದಿಗೂ ಪ್ಯಾಲೆಸ್ಟೈನ್​ ರಾಷ್ಟ್ರ ಇರುವುದಿಲ್ಲ ಎಂದು ಹೇಳಿದ್ದರು. ಇದರ ನಡುವೆ ಈ ಮೂರು ರಾಷ್ಟ್ರಗಳ ಹೇಳಿಕೆ ಬಗ್ಗೆ ಇಸ್ರೇಲ್​ ಇದೀಗ ನಿಗಿನಿಗಿ ಕೆಂಡ ಕಾರುತ್ತಿದೆ. ಕೆಲ ಸಚಿವರು ತೀವ್ರವಾಗಿ ಟೀಕಿದ್ದಾರೆ ಅಲ್ಲದೆ, ಈ ಹೇಳಿಕೆಗಳನ್ನು ಹಲವು ಇಸ್ರೇಲಿಯರು ತಳ್ಳಿ ಹಾಕಿದ್ದಾರೆ. ಇದರ ನಡುವೆ ಅಮೆರಿಕ ಕೂಡ ಟೀಕಿಸಿದೆ. ಇತರರು ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ನೇರ ಮಾತುಕತೆಗಳ ಮೂಲಕ ಮಾತ್ರ ಪ್ಯಾಲೆಸ್ಟೀನಿಯನ್ ರಾಷ್ಟ್ರವನ್ನು ಸಾಧಿಸಬಹುದು ಎಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)