ಕೊಟ್ಟೂರಿನಲ್ಲಿ ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಮೂರ್ತಿ ಪ್ರತಿಷ್ಠಾಪನೆ ಶತಮಾನೋತ್ಸವ ಹಿನ್ನೆಲೆಯಲ್ಲಿ ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಶಾಸಕ ಕೆ.ನೇಮಿರಾಜ್ ನಾಯ್ಕ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಇತರರಿದ್ದರು.
ಕೊಟ್ಟೂರು: ಪಟ್ಟಣದಲ್ಲಿ ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಯ ಶತಮಾನೋತ್ಸವ ಪ್ರಯುಕ್ತ ಸೋಮವಾರ ಪದ್ಮಶಾಲಿ ಬಹೂತ್ತಮ ಸಮಾಜದಿಂದ ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀ ಗುರುಕೊಟ್ಟೂರೇಶ್ವರಸ್ವಾಮಿ ಮಠದಿಂದ ಡೊಳ್ಳು ಕುಣಿತ, ಸಮಾಳ, ನಂದಿಕೋಲು ಕುಣಿತದೊಂದಿಗೆ ಪದ್ಮಶಾಲಿ ಜಮುದಾಯದ ಮಹಿಳೆಯರು 108 ಕುಂಭ-ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದರು. ಮಾರ್ಕಂಡೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ತಲುಪಿತು.
ಶಾಸಕ ಕೆ.ನೇಮಿರಾಜ್ ನಾಯ್ಕ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಶ್ರೀ ಪದ್ಮಶಾಲಿ ಬಹೂತ್ತಮ ಸಮಾಜದ ಅಧ್ಯಕ್ಷ ಗೋರಂಟ್ಲಿ ಕೊಟ್ರೇಶ, ಖಜಾಂಚಿ ದೇವರೆಡ್ಡಿ ಪ್ರಕಾಶ, ಕಾರ್ಯದರ್ಶಿ ದೇವರೆಡ್ಡಿ ಪರಮೇಶ್ವರಪ್ಪ, ಮೇಡಂ ನಾಗರಾಜ, ಭಾವಿಕಟ್ಟಿ ಶಿವಾನಂದ ಮತ್ತಿತರರು ಇದ್ದರು.