ನ್ಯೂಸ್

ಯುಜಿ ಸಿಇಟಿ/ನೀಟ್: ಮೊದಲ ದಿನವೇ 5 ಲಕ್ಷ ಆಪ್ಷನ್ ಸಲ್ಲಿಕೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸಕ್ತ ಸಾಲಿನ ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ಆಪ್ಷನ್ ಎಂಟ್ರಿ ಆರಂಭಿಸಿದ್ದು, ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು ತಮ್ಮ ಆದ್ಯತೆಯ ಕೋರ್ಸ್‌ಗಳಿಗಾಗಿ ಐದು ಲಕ್ಷ ಆಪ್ಷನ್‌ಗಳನ್ನು ದಾಖಲಿಸಿದ್ದಾರೆ.

ಭಾನುವಾರ ಬೆಳಿಗ್ಗೆ 7ಕ್ಕೆ ಆಪ್ಷನ್ ದಾಖಲಿಸಲು ಕೆಇಎ ಅವಕಾಶ ನೀಡಿತ್ತು. ಮೊದಲ ಎರಡು ಗಂಟೆ ಸರ್ವರ್ ಸ್ವಲ್ಪ ನಿಧಾನ ಇದ್ದ ಕಾರಣ ಸ್ವಲ್ಪ ಸಮಸ್ಯೆಯಾಗಿತ್ತು. ನಂತರ ಸಂಬಂಧಪಟ್ಟ ಕಂಪ್ಯೂಟರ್ ಇಂಜಿನಿಯರ್‌ಗಳು ಅದಕ್ಕೆ ಪರಿಹಾರ ಕಂಡುಕೊಂಡ ಬಳಿಕ ಅಭ್ಯರ್ಥಿಗಳು ತಮ್ಮ ಇಚ್ಛೆಯನುಸಾರ ಕೋರ್ಸ್‌ಗಳನ್ನು ಸರಾಗವಾಗಿ ದಾಖಲಿಸಿದ್ದಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಐದು ಲಕ್ಷ ಆಪ್ಷನ್ ಎಂಟ್ರಿಗಳಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ 3 ಲಕ್ಷ, ವೈದ್ಯಕೀಯ ಕೋರ್ಸ್‌ಗೆ 1.25 ಲಕ್ಷ ಎಂಟ್ರಿಗಳಾಗಿವೆ. ಉಳಿದ 75 ಸಾವಿರ ಆಪ್ಷನ್ ಎಂಟ್ರಿಗಳು ಕೃಷಿ,

ಆಪ್ಷನ್ ಎಂಟ್ರಿಗೆ ಆ.9ರ ವರೆಗೆ ಅವಕಾಶವಿದ್ದು, ಅಷ್ಟರೊಳಗೆ ತಮ್ಮ ಇಚ್ಛೆಯನುಸಾರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ವಿವರಿಸಿದ್ದಾರೆ.

ಆಪ್ಷನ್ ಎಂಟ್ರಗೆ ವೀಡಿಯೋ ತುಣುಕು:

ಯಾವ ರೀತಿ ಆಪ್ಷನ್ ಎಂಟ್ರಿ ಮಾಡಬೇಕು ಎಂಬುದನ್ನು ಮಾರ್ಗದರ್ಶನ ಮಾಡಲು ವೀಡಿಯೊ ತುಣುಕನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಗೊಂದಲ ಉಂಟಾದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ಪಾಲಕರ ಜತೆ ಕುಳಿತು ಆಪ್ಷನ್ ಎಂಟ್ರಿ ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್.. ಹೀಗೆ ಪ್ರತ್ಯೇಕ ಗುಂಪುಗಳನ್ನು ಮಾಡಿದ್ದು, ಅಲ್ಲಿ ಕ್ಲಿಕ್ ಮಾಡಿದರೆ ತಮ್ಮ ಇಚ್ಛೆಯ ಕೋರ್ಸ್ ಆಯ್ಕೆಗೂ ಸುಲಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.