ನ್ಯೂಸ್

ಉದ್ಯಾವರದಲ್ಲಿ ವಿದ್ಯುತ್ ಶಾಕ್ ಗೆ ಯುವಕ ಬಲಿ

udupireporter

ಉಡುಪಿ: ಉದ್ಯಾವರ ಕನಕೋಡ ಎಂಬಲ್ಲಿ ವಿದ್ಯುತ್ ಶಾಕ್ ನಿಂದ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ.

ಮಲ್ಪೆ ಕೊಡವೂರಿನ ಮನೋಜ್ ಕರ್ಕೇರ, ಶಶಿಕಲಾ ದಂಪತಿ ಪುತ್ರ ಮೋಕ್ಷಿತ್ ಕರ್ಕೇರ(25) ಮೃತಪಟ್ಟ ಯುವಕ. ಬುಧವಾರ‌ ಸಾಯಂಕಾಲ ಉದ್ಯಾವರ ಕನಕೋಡದಲ್ಲಿರುವ ಮೋಕ್ಷಿತ್ ಅವರ ಚಿಕ್ಕಪ್ಪ ಶಂಕರ್ ಎಂಬವರ ಮನೆಯಲ್ಲಿದ್ದಾಗ ಗಾಳಿಮಳೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ಈ ವೇಳೆ ಮೋಕ್ಷಿತ್ ಮೈನ್ ಸ್ವಿಚ್ ಬೋರ್ಡ್ ಪರಿಶೀಲನೆಗೆ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ವಿದ್ಯುತ್ ಶಾಕ್ ತಗುಲಿ ಅನಾಹುತ ಸಂಭವಿಸಿದೆ. ಅಸ್ವಸ್ಥಗೊಂಡ ಮೋಕ್ಷಿತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದಾರೆ.