ನ್ಯೂಸ್

ಅಮಿತ್​ ಶಾ ಅವರು ಈ ಮಾತು ನಡೆಸಿಕೊಟ್ಟಿದ್ದರೆ ಬಿಜೆಪಿ ಜತೆಯಲ್ಲೇ ಇರುತ್ತಿದ್ದೆವು: ಉದ್ಧವ್​ ಠಾಕ್ರೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಿಜೆಪಿ ಜತೆಗಿನ 25 ವರ್ಷಗಳ ಮೈತ್ರಿ ಮುರಿಯಲು ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಶಿವಸೇನೆಯ ಹೆಸರಿನಲ್ಲಿ ಬಿಜೆಪಿ ಸೃಷ್ಟಿಸಿರುವ ಕೆಲವರಿಂದ ನಮ್ಮ ಸರ್ಕಾರ ಬೀಳಲು ಕಾರಣವಾಯಿತು. ಏನೇ ಆಗಿದ್ದರೂ, ಈ ಹಿಂದೆ ಚುನಾವಣೆ ಸಂದರ್ಭದಲ್ಲೇ ಅಮಿತ್​ ಶಾ ಅವರ ನಮ್ಮ ಬೇಡಿಕೆಗೆ ಮಣಿದಿದ್ದರೆ ನಾವು ಬಿಜೆಪಿಯೊಂದಿಗಿನ ಸ್ನೇಹ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬಾಳಾಸಾಹೇಬ್​ ಠಾಕ್ರೆ ಅವರ ಕಾಲದಿಂದಲೂ ಬಿಜೆಪಿ ಜತೆಗೆ 25 ವರ್ಷಗಳ ಸ್ನೇಹವನ್ನು ಹೊಂದಿದ್ದೆವು. 2019ರ ಚುನಾವಣೆಯಲ್ಲಿ ಸಿಎಂ ಸ್ಥಾನವನ್ನು ನಮಗೆ ನೀಡಿ ಎಂದು ಕೇಳಿಕೊಂಡಿದ್ದೆವು. ಆದರೆ ಅವರು ನೀಡಲಿಲ್ಲ ಇದೇ ಕಾರಣಕ್ಕೆ ನಾವು ಎನ್​ಸಿಪಿ ಜನತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯವಿತ್ತು ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)