ನ್ಯೂಸ್

ಉಸೇನ್ ಬೋಲ್ಟ್ ಖಾತೆಯಿಂದ ಬರೋಬ್ಬರಿ 100 ಕೋಟಿ ರೂ. ಮಾಯ!

ಕಿಂಗ್‌ಸ್ಟನ್: ವಿಶ್ವದ ಅತೀ ವೇಗದ ಓಟಗಾರ ಉಸೇನ್​ ಬೋಲ್ಟ್​ ಖಾತೆಯಿಂದ ಬರೋಬ್ಬರಿ 100 ಕೋಟಿ ರೂ. ಕಾಣೆಯಾಗಿದೆ.
ಜಮೈಕಾದ ಹೂಡಿಕೆ ಸಂಸ್ಥೆಯೊಂದರಲ್ಲಿ ತಮ್ಮ ಖಾತೆಯಿಂದ ಕಣ್ಮರೆಯಾದ 100 ಕೋಟಿ ರೂ. ಗೂ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಲು ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಪ್ರಯತ್ನಿಸುತ್ತಿದ್ದು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಪ್ರಕರಣವನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಬೋಲ್ಟ್ ವಕೀಲರು ತಿಳಿಸಿದ್ದಾರೆ.

SSL ಕಂಪೆನಿ, ಜನವರಿ 12 ರ ಹೇಳಿಕೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಕೊಂಡಿದೆ. ಶೇರ್​ಗಳನ್ನು ಸುರಕ್ಷಿತಗೊಳಿಸಲಿಕ್ಕಾಗಿ ಪ್ರೋಟೋಕಾಲ್‌ಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಜಮೈಕಾ ಕಾನ್‌ಸ್ಟಾಬ್ಯುಲರಿ ಫೋರ್ಸ್ ಸೋಮವಾರ ತನ್ನ ವಂಚನೆ ಮತ್ತು ಹಣಕಾಸು ತನಿಖಾ ತಂಡಗಳು SSLನಲ್ಲಿನ ಮೋಸದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದು ಇದು ಇತರರ ನಡುವೆ ಉಸೇನ್ ಬೋಲ್ಟ್​ರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಬೋಲ್ಟ್, ತಮ್ಮ ಖಾತೆಯಿಂದ ಬರುತ್ತಿದ್ದ ಬಡ್ಡಿ ಹಣದ ಆಧಾರದ ಮೇಲೆ ತಮ್ಮ ಹಾಗೂ ತಮ್ಮ ಪೋಷಕರ ಜೀವನ ನಿರ್ವಹಿಸುತ್ತಿದ್ದರು.