ನ್ಯೂಸ್

ಹೋಟೆಲ್ ಡೆನಿಸನ್ಸ್‌ನಲ್ಲಿ ಟೈಕಾನ್ ಸಮಾವೇಶ 1ರಿಂದ

ವೀರೇಶ ಸೌದ್ರಿ

ಹುಬ್ಬಳ್ಳಿ: ಟೈ ಹುಬ್ಬಳ್ಳಿ ವತಿಯಿಂದ ಟೈಕಾನ್-2025 ಉದ್ಯಮಶೀಲತೆ ಹಾಗೂ ವಾಣಿಜ್ಯ ಸಮಾವೇಶ ೆಬ್ರವರಿ 1 ಮತ್ತು 2ರಂದು ಇಲ್ಲಿನ ಹೋಟೆಲ್ ಡೆನಿಸನ್ಸ್‌ನಲ್ಲಿ ಆಯೋಜಿಸಲಾಗಿದೆ.

ಚಾಯ್ ಪಾಯಿಂಟ್ ಸಿಇಒ ಮತ್ತು ಸಹ ಸಂಸ್ಥಾಪಕ ಅಮುಲೀಕಸಿಂಗ್ ಬಿಜರಾಲ್, ಮೆಡ್‌ಲೈನ್ ಅಕಾಡೆಮಿಕ್ಸ್ ಸಹ ಸಂಸ್ಥಾಪಕಿ ಹಾಗೂ ಚೇರ್‌ಪರ್ಸನ್ ಡಾ. ಕಾಮಿನಿ ರಾವ್, ಆರ್ಥಿಕ ಸಲಹೆಗಾರ ವಿ. ಬಾಲಾಜಿ ಭಟ್, ಟೈ ಗ್ಲೋಬಲ್ ಚೇರ್ಮನ್ ಮುರಳಿ ಬುಕ್ಕಾಪಟ್ನಮ್, ವೆಂಕಟರಮಣ ಅಸೋಸಿಯೇಟ್ಸ್ ನಿರ್ದೇಶಕ ಕುಮಾರ ರವೀಂದ್ರ, ಅಲ್ಫಾಲಿಯೋ ಕ್ಯಾಪಿಟಲ್‌ನ ಸಂಸ್ಥಾಪಕ ಪ್ರುಲ್ ಕುಲಕರ್ಣಿ, ಅಂಕಣಗಾರ್ತಿ ಶೇಾಲಿ ವೈದ್ಯ, ಬ್ರೌಸರ್ ಸ್ಟಾಕ್‌ನ ಗ್ಲೋಬಲ್ ಡೈರೆಕ್ಟರ್ ಹಿಮಾಂಶು ಗೋಯಲ್, ಬೊಲ್ಲಾಂತ್ ಇಂಡಸ್ಟ್ರೀಸ್‌ನ ಸಹ ಸಂಸ್ಥಾಪಕ ರವಿ ಮಂಥಾ, ಚಾಂಪಿಯನ್ಸ್ ಗ್ರುಪ್ ಚೇರ್ಮನ್ ಮತ್ತು ಸಂಸ್ಥಾಪಕ ಸುಭಕರರಾವ್ ಸುರಪನೇನಿ, ಸ್ವೀಟಿ ನಿಂಜಾಸ್ ಸಹ ಸಂಸ್ಥಾಪಕಿ ಶ್ವೇತಾ ದೇವರಾಜ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು.

ಉತ್ತರ ಕರ್ನಾಟಕದ ಉದ್ಯಮಶೀಲತೆ ಮತ್ತು ನಾವಿನ್ಯತೆಗೆ ಗಣನೀಯ ಕೊಡುಗೆ ನೀಡಿರುವ ಉದ್ಯಮಿ ಹಾಗೂ ಉದ್ಯಮ ಸಂಸ್ಥೆಗಳಿಗೆ ಟೈ ಹುಬ್ಬಳ್ಳಿ ಎಂಟರಪ್ರಿನರಶಿಪ್ ಅವಾರ್ಡ್ ನೀಡಲಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯು ಈ ಭಾಗದ ನಾಯಕತ್ವ, ಪರಿಶ್ರಮ ಮತ್ತು ಯಶಸ್ಸಿಗೆ ಮತ್ತಷ್ಟು ಸ್ಪೂರ್ತಿ ನೀಡಲಿದೆ. ಪ್ರಶಸ್ತಿಗಾಗಿ ಉತ್ಪಾದನೆ, ಸೇವೆ/ವ್ಯಾಪಾರ, ಸ್ಟಾರ್ಟ್‌ಅಪ್, ಮಹಿಳಾ ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಹೆಸರುಗಳನ್ನು ನಾಮನಿರ್ದೇಶನ ಮಾಡಬಹುದಾಗಿದೆ.

ಪ್ರಶಸ್ತಿಗಳಿಗಾಗಿ ಜ. 25ರೊಳಗೆ ನಾಮನಿರ್ದೇಶನ ಮಾಡಲು ಅಥವಾ ಅರ್ಹ ಅಭ್ಯರ್ಥಿಗಳನ್ನು ಶಿಾರಸ್ಸು ಮಾಡಲು ವೆಬ್‌ಲಿಂಕ್

ಡಿಡಿಡಿ.ಠಿಜಿಛಿಜ್ಠಚ್ಝಿಜಿ.ಟ್ಟಜ

ನಲ್ಲಿ ಅವಕಾಶ ನೀಡಲಾಗಿದೆ.

ಟೈ ಹುಬ್ಬಳ್ಳಿ ಪ್ರಶಸ್ತಿಗಳು ಉತ್ತರ ಕರ್ನಾಟಕದ ಅಸಾಧಾರಣ ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗಿವೆ. ನಮ್ಮ ಪ್ರದೇಶದಲ್ಲಿ ನಾವಿನ್ಯತೆ ಮತ್ತು ಪ್ರಗತಿಗೆ ಪರಿಶ್ರಮಿಸುವವರನ್ನು ಗೌರವಿಸಲು ಉತ್ತಮ ವೇದಿಕೆಯಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ ಪಾಟೀಲ ತಿಳಿಸಿದ್ದಾರೆ.