ರಾಷ್ಟ್ರೀಯ ಹೆದ್ದಾರಿ -75ರ ರಸ್ತೆಪಾಳ್ಯ ಸಮೀಪದ ಗಾಂಧಿ ಫಾರ್ಮ ಬಳಿ ದ್ವಿಚಕ್ರ ವಾಹನ ಡಿವೈಡರ್​ಗೆ ಡಿಕ್ಕಿಯಾಗಿ ಬೆಂಗಳೂರು ನಗರದ ಕೇಶವ ಪ್ರಸಾದ್​ ಹಾಗೂ ಮಯೂರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  
ನ್ಯೂಸ್

ಅಪಘಾತದಲ್ಲಿ ಇಬ್ಬರು ಯುವಕರು ಸಾವು

ಕುದೂರು: ರಾಷ್ಟ್ರೀಯ ಹೆದ್ದಾರಿ -75ರ ರಸ್ತೆಪಾಳ್ಯ ಸಮೀಪದ ಗಾಂಧಿ ಫಾರ್ಮ ಬಳಿ ಭಾನುವಾರ ದ್ವಿಚಕ್ರ ವಾಹನ ಡಿವೈಡರ್​ಗೆ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರು ನಗರದ ಕೇಶವ ಪ್ರಸಾದ್​(21) ಹಾಗೂ ಮಯೂರ್​( 20) ಮೃತರು.
ಹಾಸನದಿಂದ ನೆಲಮಂಗಲ ಕಡೆಗೆ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾಗಿದೆ. ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.