ನ್ಯೂಸ್

ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

ಹೈದರಾಬಾದ್‌: ಸಲಿಂಗ ವಿವಾಹವಾಗಿದ್ದ ಯುವತಿಯರಿಬ್ಬರಲ್ಲಿ ಓರ್ವ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಮಂಡಲದಲ್ಲಿ ನಡೆದಿದೆ.

ಸಲಿಂಗ ಜೋಡಿ ಮದುವೆಯಾಗಿ ಒಟ್ಟಿಗೆ ಬಾಳುವೆ ನಡೆಸುವುದು ಅಸ್ವಾಭಾವಿಕ ಎಂಬುದು ನಮ್ಮ ದೇಶದ ಜನರ ನಂಬಿಕೆ. ಅಲ್ಲದೆ, ಇಂತಹ ವಿವಾಹಗಳನ್ನು ನಮ್ಮ ಸಮಾಜ ಬಲವಾಗಿ ವಿರೋಧಿಸುತ್ತದೆ. ಒಂದು ವೇಳೆ ಸಮಾಜದ ವಿರೋಧದ ನಡುವೆಯೂ ಮದುವೆಯಾದರೆ ಅಂತವರನ್ನು ವಿಚಿತ್ರವಾಗಿ ನೋಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶದಲ್ಲೂ ಇಂತಹ ಪ್ರಕರಣಗಳು ವಿರಾಳಾತಿ ವಿರಳವಾಗಿದೆ.

ಇನ್ನು ಘಟನೆಯ ವಿವರಣೆಗೆ ಬರುವುದಾದರೆ ಶಂಕರಪಲ್ಲಿ ಮಂಡಲದ ೧೯ ವರ್ಷದ ಯುವತಿ ಪದವಿ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪಲ್ವಾಂಚದ ಹಾಸ್ಟೆಲ್‌ ಒಂದರಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದರ ನಡುವೆ ತಮ್ಮ ಕಾಲೇಜಿನ ಮನುಗುರು ಮೂಲದ ೨೪ ವರ್ಷದ ಯುವತಿಯ ಪರಿಚಯವಾಗಿತ್ತು. ಇಬ್ಬರ ನಡುವೆ ಬೇರ್ಪಡಿಸಲಾಗದ ಸ್ನೇಹವೂ ಬೆಳೆದಿತ್ತು.

ಸ್ನೇಹ ಅಗಾಧವಾದ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಒಟ್ಟಿಗೆ ಬಾಳಲು ನಿರ್ಧರಿಸಿದರು. ಕಳೆದ ಜನವರಿಯಲ್ಲಿ ಮನೆ ಬಿಟ್ಟು ಓಡಿ ಹೋಗಿ ವಿಕಾರಬಾದ್‌ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ಮೆನಯಲ್ಲಿ ತಮ್ಮ ನಿರ್ಧಾರವನ್ನು ಒಪ್ಪದಿದ್ದಕ್ಕೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಹೀಗಿರುವಾಗ ಶಂಕರಪಲ್ಲಿ ಮೂಲದ ಯುವತಿಯ ಪಾಲಕರು ತಮ್ಮ ಮಗಳು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುವ ಪೊಲೀಸರಿಗೆ ಇಬ್ಬರು ಯುವತಿಯರು ಮೂರು ತಿಂಗಳ ಹಿಂದೆ ಪತ್ತೆಯಾಗುತ್ತಾಳೆ. ಬಳಿಕ ಇಬ್ಬರಿಗೂ ಆಪ್ತ ಸಮಾಲೋಚನೆಯನ್ನು ನಡೆಸಿ ಪಾಲಕರಿಗೆ ಹಸ್ತಾಂತರ ಮಾಡುತ್ತಾರೆ.

ಅವರವರ ಮನೆಗಳಿಗೆ ತೆರಳಿದ ಮೇಲೆಯೂ ಯುವತಿಯರಿಬ್ಬರು ತಮ್ಮ ಸಂಬಂಧವನ್ನು ಮುಂದುವರಿಸುತ್ತಾರೆ. ಪ್ರತಿದಿನ ಫೋನ್‌ ಕಾಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ಇದು ಗೊತ್ತಾಗಿ ಪಾಲಕರು ಇಬ್ಬರಿಗೂ ಎಚ್ಚರಿಕೆಯನ್ನು ನೀಡಿ ನಿಮ್ಮ ನಡೆಯನ್ನು ಬದಲಾಯಿಸಿಕೊಳ್ಳಿ ಎಂದು ಹೇಳುತ್ತಾರೆ. ಆದಾಗ್ಯು ತಮ್ಮ ನಡೆ ಬದಲಿಸಿದ ಯುವತಿಯರು ಚಾಟಿಂಗ್‌ ಮತ್ತು ಫೋನ್‌ ಮಾಡುವುದನ್ನು ಮುಂದುವರಿಸುತ್ತಾರೆ.

ಹೀಗಿರುವಾಗ ಶಂಕರಪಲ್ಲಿ ಮಂಡಲ ಮೂಲದ ಯುವತಿ ಕಳೆದ ಹತ್ತು ದಿನಗಳಿಂದ ಮನೆಯವರ ಜೊತೆ ಜಗಳ ಆಡುತ್ತಿದ್ದಳು. ಇದರಿಂದ ಮನನೊಂದ ಯುವತಿ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾಹಿತಿ ತಿಳಿದ ಪೊಲೀಷರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)