ನ್ಯೂಸ್

ನೀರು ತುಂಬಿದ ದೋಣಿಯಲ್ಲಿ ಬಿದ್ದು ಎರಡು ವರ್ಷದ ಮಗು ಸಾವು| Child Death

ಕೊಪ್ಪಳ: ಗ್ರಾಮದಲ್ಲಿ ಬಟ್ಟೆ ತೊಳೆಯಲು ನಿರ್ಮಿಸಿದ್ದ ನೀರು ತುಂಬಿದ ದೋಣಿಯಲ್ಲಿ ಬಿದ್ದು ಎರಡು ವರ್ಷದ ಮಗು ಮೃತಪಟ್ಟ(Child Death) ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ಭಾನುವಾರ(ನ. 09) ನಡೆದಿದೆ.

ಮೃತ ಮಗುವನ್ನು 2 ವರ್ಷದ ಅನುಶ್ರೀ ಎಂದು ಗುರುತಿಸಲಾಗಿದೆ. ಮಹಾಂತೇಶ ಕರಡಿ ಎನ್ನುವವರ ಮಗು. ಮನೆಯಿಂದ ಹೊರಗಡೆ ಆಟವಾಡಲು ಹೋಗಿದ್ದಾಗ ಶಾಲೆಯ ಬಳಿಯಿದ್ದ ದೋಣಿಯಲ್ಲಿ ಆಯತಪ್ಪಿ ಬಿದ್ದಿದೆ ಎನ್ನಲಾಗಿದೆ. ನೀರು ಕುಡಿಯಲು ಬಂದಿದ್ದ ಎಮ್ಮೆ ಮಗುವಿನ ಕುಲಾಯಿ ಬಟ್ಟೆ ನೋಡಿ ಬೆದರಿದ ಬಳಿಕ ಸ್ಥಳೀಯರಿಗೆ ಮಗು ಬಿದ್ದಿದ್ದು ಕಂಡಿದೆ ಎನ್ನಲಾಗಿದೆ.

ತಕ್ಷಣ ಮಗುವನ್ನು ಹನುಮಸಾಗರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ. ಇನ್ನು ಮಗು ಸಾವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.