ನ್ಯೂಸ್

ಮುಸ್ಲಿಂ ಮಂತ್ರವಾದಿಯ ಸೋಗಿನಲ್ಲಿ ವಂಚಿಸುತ್ತಿದ್ದ ಗುಜರಿ ವ್ಯಾಪಾರಿಗಳಿಗೆ ಧರ್ಮದೇಟು!

ಮಂಗಳೂರು: ನಕಲಿ ಮುಸ್ಲಿಂ ಮಂತ್ರವಾದಿಗಳನ್ನು ಮನೆಯಲ್ಲಿ ಕೂಡಿ ಹಾಕಿ ಥಳಿಸಿರುವ ಘಟನೆ ಜೂ.3ರಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ವಳಾಲು ಎಂಬಲ್ಲಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!

ಕಡಬ ಕೋಡಿಂಬಳ ನಿವಾಸಿಗಳಾದ ಆಲಿ, ಮಮ್ಮು ಎಂಬುವರು ಮಂತ್ರವಾದಿಗಳ ಸೋಗಿನಲ್ಲಿ ಏಟು ತಿಂದವರು. ಉಪ್ಪಿನಂಗಡಿಯ ಮಗುವಿಗೆ ಆರೋಗ್ಯ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬ ಮಂತ್ರವಾದಿಗಳನ್ನು ಸಂಪರ್ಕಿಸಿತ್ತು. ಮನೆಗೆ ಆಗಮಿಸಿದ್ದ ಮಂತ್ರವಾದಿಗಳು ಕಪ್ಪು ಬಣ್ಣದ ನೂಲನ್ನು ಮಂತ್ರಿಸಿ ಮಗುವಿಗೆ ಕಟ್ಟಿದರು. ಈ ವೇಳೆ ಮಂತ್ರವಾದಿ ಎಂದು ಹೇಳಿಕೊಂಡವರ ಪರಿಚಯದವರೊಬ್ಬ ಅದೇ ಮನೆಗೆ ಬಂದಾಗ, ಇವರು ಮಂತ್ರವಾದಿಗಳಲ್ಲ ಎಂಬುದು ಗೊತ್ತಾಗಿದೆ. ಇದರಿಂದ ಗುಜರಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ ಮಂತ್ರವಾದಿಯ ಸೋಗಿನಲ್ಲಿ ವಂಚನೆ ನಡೆಸುತ್ತಿದ್ದುದು ಬಹಿರಂಗವಾಗಿದೆ.

ಮಂತ್ರವಾದಿ ವೇಷ ಬಯಲಾಗುತ್ತಿದ್ದಂತೆ ಯುವಕರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಗೊತ್ತಾಗಿದೆ. ಸದ್ಯ ಈ ಪ್ರಕರಣ ಠಾಣೆ ಮೆಟ್ಟಿಲೇರಿದ್ದು, ಬಳಿಕ ಮಾತುಕತೆಯ ಮೂಲಕ ಬಗೆಹರಿದಿದೆ ಎನ್ನಲಾಗಿದೆ.