ಒಡಿಶಾ: ರೈಲು ಅಪಘಾತ ಸಂಭವಿಸಿ ಎರಡು ತಿಂಗಳು ಕಳೆದರೂ ಇನ್ನೂ 29 ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ 295 ಜನರು ಸಾವನ್ನಪ್ಪಿದ್ದು, ಭುವನೇಶ್ವರದ ಏಮ್ಸ್‌ನಲ್ಲಿ ಐದು ಕಂಟೈನರ್‌ಗಳಲ್ಲಿ ಮೃತದೇಹಳನ್ನು ಸಂರಕ್ಷಿಸಲಾಗಿದೆ. ಉಳಿದ ಮೃತದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ ಇನ್ನೂ 29 ಶವಗಳ ಗುರುತು ಪತ್ತೆಯಾಗಿಲ್ಲ.
ಒಡಿಶಾದ ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ 295 ಜನರಲ್ಲಿ 29 ಮೃತದೇಹಗಳು ಇನ್ನೂ ಗುರುತಿನ ನಿರೀಕ್ಷೆಯಲ್ಲಿವೆ. 266 ಮೃತ ದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಮ್ಸ್ ಭುವನೇಶ್ವರ್ ಅಧೀಕ್ಷಕ ಪ್ರೊಫೆಸರ್ ದಿಲೀಪ್ ಕುಮಾರ್ ಪರಿದಾ ಮಾತನಾಡಿ, ಜೂನ್ 2 ರ ರೈಲು ಅಪಘಾತದ ನಂತರ, ಅಪಘಾತದ ಸ್ಥಳದಿಂದ ಒಟ್ಟು 162 ಮೃತದೇಹಗಳನ್ನು ಹೊರತೆಗೆಯಲಾಯಿತು. ಅವುಗಳಲ್ಲಿ 81 ಮೃತದೇಹವನ್ನು ಮೊದಲ ಹಂತದಲ್ಲಿ ಅವರ ಕುಟುಂಬ ಸದಸ್ಯರಿಗೆ ನೀಡಲಾಗಿದೆ. ಡಿಎನ್ಎ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಇನ್ನೂ 52 ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಇದೀಗ 29 ಶವಗಳ ಗುರುತು ಇನ್ನೂವರೆಗೂ ಪತ್ತೆಯಾಗಿಲ್ಲ. ಡಿಎನ್‌ಎಗೆ ಹೊಂದಿಕೆಯಾಗದ ಮೃತ ದೇಹಗಳನ್ನು ಯಾರಿಗೂ ನೀಡಲಾಗುವುದಿಲ್ಲ ಎಂದಿದ್ದಾರೆ.