ನವದೆಹಲಿ: ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿದ್ದವರನ್ನು ಬೇರೆಡೆಗೆ ಕಳಿಸಿದೆ.
ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ರಿಂಕು ದುಗ್ಗ ವರ್ಗಾವಣೆಯಾದವರು. ಸಂಜೀವ್ ಅವರನ್ನು ದೆಹಲಿಯಿಂದ ಲಡಾಖ್ಗೆ ಮತ್ತು ರಿಂಕು ಅವರನ್ನು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್ಫರ್ ಮಾಡಲಾಗಿದೆ.
ಈ ಪೈಕಿ ಸಂಜೀವ್ ಖಿರ್ವಾರ್ ತಮ್ಮ ಸಾಕುನಾಯಿಯ ಕಾರಣಕ್ಕಾಗಿ ತಳೆದ ನಿಲುವಿನಿಂದ ವಿವಾದಕ್ಕೀಡಾಗಿದ್ದರು. ಇವರು ದೆಹಲಿಯ ಕ್ರೀಡಾಂಗಣದಲ್ಲಿ ತಮ್ಮ ಮನೆಯ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಸಲುವಾಗಿ ಪ್ರತಿ ದಿನ ಕ್ರೀಡಾಪಟುಗಳನ್ನು ಮೈದಾನದಿಂದ ಹೊರಗೆ ಕಳಿಸುತ್ತಿದ್ದರು.