ನ್ಯೂಸ್

ಎರಡು ತಲೆ ಹಾವನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಪ್ರಾಮಾಣಿಕತೆ; ನಿಸರ್ಗ ಹೋಟೆಲ್ ಮಾಲೀಕರ ಸೇವೆಗೆ ಮೆಚ್ಚುಗೆ

ರಾಣೆಬೆನ್ನೂರ: ತಮ್ಮ ಆವರಣಕ್ಕೆ ಬಂದಿದ್ದ ಎರಡು ತಲೆ ಹಾವನ್ನು ಹೋಟೆಲ್ ಮಾಲೀಕರು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ತಾಲೂಕಿನ ಚಳಗೇರಿ ಟೋಲ್ ಬಳಿಯಿರುವ ನಿಸರ್ಗ ಹೋಟೆಲ್ ಆವರಣದಲ್ಲಿ ಮಂಗಳವಾರ ರಾತ್ರಿ ಎರಡು ತಲೆ ಕಾಣಿಸಿಕೊಂಡಿತ್ತು. ಕೂಡಲೇ ಹೋಟೆಲ್‌ನ ಮಾಲೀಕ ಯಲ್ಲರೆಡ್ಡಿ ಹಾಗೂ ಪ್ರದೀಪ ರೆಡ್ಡಿ ಹಾವನ್ನು ಹಿಡಿದು ಬಕೆಟ್‌ನಲ್ಲಿ ಇಟ್ಟಿದ್ದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹೋಟೆಲ್‌ಗೆ ಬಂದ ಅರಣ್ಯ ಇಲಾಖೆಯ ಆರೀಫ್ ಎಂಬುವರಿಗೆ ಹಾವು ಹಸ್ತಾಂತರ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಹಾವನ್ನು ಪ್ರಾಮಾಣಿಕತೆಯಿಂದ ಅರಣ್ಯಾಧಿಕಾರಿಗಳಿಗೆ ನೀಡಿದ್ದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.