ನ್ಯೂಸ್

ಮದುವೆ ನಿರಾಕರಿಸಿ ಎಸ್ಕೇಪ್​ ಆದ ಯುವತಿಯರಿಬ್ಬರ ಸಂದೇಶ ನೋಡಿ ಬೆಚ್ಚಿಬಿದ್ದ ಪಾಲಕರು..!

ಕರ್ನೂಲ್​: ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಯುವತಿಯರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಮನೆ ಬಿಟ್ಟು ಓಡಿ ಹೋಗಿರುವ ವಿಚಿತ್ರ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ.

21 ವರ್ಷದ ಸಂತೋಷ್​ ನಗರದ ನಿವಾಸಿ ಹಾಗೂ 20 ವರ್ಷದ ನರಸಿಂಗರೆಡ್ಡಿ ನಗರ ನಿವಾಸಿ ಬಾಲ್ಯ ಸ್ನೇಹಿತೆಯರಾಗಿದ್ದರು. ಬೆಳೆಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಕರ್ನೂಲ್​ ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದರು. ಇಬ್ಬರ ಮನೆಯು ಸಹ ತುಂಬಾ ಸಮೀಪವೇ ಇತ್ತು.

ಇಬ್ಬರಲ್ಲಿ ಓರ್ವ ಯುವತಿಗೆ ಈಗಾಗಲೇ ಮದುವೆಯಾಗಿತ್ತು. ಇನ್ನೊಂದು ಯುವತಿಗೆ ವರನ ಹುಡುಕಾಟದಲ್ಲಿದ್ದರು. ಆದರೆ, ಹುಡುಗರೊಂದಿಗೆ ಸಹ್ಯ ಬೆಳೆಸಲು ಇಚ್ಛಿಸದ ಯುವತಿಯರು ನ. 3ರಂದು ಮನೆಯಿಂದ ಓಡಿ ಹೋಗಿದ್ದಾರೆ.

ಪರಸ್ಪರ ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಪಾಲಕರಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಮಕ್ಕಳ ಸಂದೇಶ ನೋಡಿದ ಪಾಲಕರು ಗಾಬರಿಗೊಂಡ ತಕ್ಷಣ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯರ ಹುಡುಕಾಟದಲ್ಲಿದ್ದಾರೆ. ಇದೀಗ ಯುವತಿಯರಿಬ್ಬರ ವಿಚಾರ ಸ್ಥಳೀಯ ಜನರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)