ದೆಹಲಿ: ಮೆಟ್ರೋ ಆಗಾಗ ಸುದ್ದಿಯಲ್ಲಿರುತ್ತದೆ. ಕೆಲವೊಮ್ಮೆ ಜನಜಂಗುಳಿಯಿಂದ, ಕೆಲವೊಮ್ಮೆ ಮೆಟ್ರೋದೊಳಗೆ ಹುಡುಗಿಯರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ದೆಹಲಿ ಮೆಟ್ರೋ ರೈಲಿನೊಳಗೆ ಯಾರಾದರೂ ಮೇಕಪ್ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಮೆಟ್ರೋ ಬೋಗಿಯೊಳಗೆ ಕುಳಿತಿದ್ದಾರೆ. ಆ ಬೋಗಿ ಬಹಳ ಖಾಲಿಯಾಗಿ ಕಾಣುತ್ತಿದೆ. ಇಬ್ಬರು ಯುವತಿಯರ ಪಕ್ಕದಲ್ಲಿ ಪ್ರಯಾಣಿಕರಿರಲಿಲ್ಲ. ಆ ಇಬ್ಬರು ಯುವತಿಯರು ಸಿಕ್ಕಮೇಕಪ್ ಮಾಡಲು ಪ್ರಾರಂಭಿಸಿದರು. ಹುಡುಗಿಯರಿಬ್ಬರೂ ಮುಖಕ್ಕೆ ಕ್ರೀಂ ಹಚ್ಚಿಕೊಂಡು ಮೇಕಪ್ ಮಾಡಲು ಕುಳಿತರು. ಒಬ್ಬ ಹುಡುಗಿ ಮನೆಯಲ್ಲಿ ಕುಳಿತಂತೆ ಕಾಲುಗಳನ್ನು ಅಡ್ಡ ಹಾಕಿಕೊಂಡು ಕುಳಿದ್ದರು. ಇಬ್ಬರು ದೆಹಲಿಯ ಹುಡುಗಿಯರು ಎನ್ನಲಾಗಿದೆ. ಮೆಟ್ರೋ ಒಳಗೆ ಇಂತಹ ದೃಶ್ಯ ಕಾಣುವುದು ಅಪರೂಪ ಎನ್ನಲಾಗಿದೆ.
ಈ ತಮಾಷೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ delhi.connection ಎಂಬ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ಮನೆಯಲ್ಲಿ ಸಂಪ್ರದಾಯಸ್ಥ ಹುಡುಗಿಯರಂತೆ ನಟಿಸುತ್ತಾರೆ.. ಹೊರಗೆ ಬಂದ ಮೇಲೆ ಅವರ ನಿಜ ರೂಪ ತೋರಿಸುತ್ತಾರೆ ಎಂದು ಯಾರೋ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಟಿಕೆಟ್ ಜತೆಗೆ ಉಚಿತ ಮೇಕಪ್ ಕಿಟ್ ನೀಡಬಾರದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.