ವಿಜಯಪುರ: ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ತೆಪ್ಪ ಮಗುಚಿ ಮೀನುಗಾರರಿಬ್ಬರು ಜಲಸಮಾಧಿ ಆಗಿದ್ದಾರೆ.
ಕೊಲ್ಹಾರ ತಾಲೂಕಿನ ಸಿದ್ದನಾಥ ಪುನರ್ವಸತಿ ಕೇಂದ್ರದ ನಿವಾಸಿಗಳಾದ ಪರಶುರಾಮ ಲಮಾಣಿ (35) ಮತ್ತು ರಮೇಶ್ ಲಮಾಣಿ (38) ಮೃತರು.
ಸಿದ್ದನಾಥ ಪುನರ್ವಸತಿ ಕೇಂದ್ರದ ಸಮೀಪ ನದಿಯಲ್ಲಿ ಮೀನು ಹಿಡಿಯಲೆಂದು ಗುರುವಾರ ಸಂಜೆ ಬಲೆ ಹಾಕಲು ಪರಶುರಾಮ ಮತ್ತು ರಮೇಶ್ ಲಮಾಣಿ ತೆಪ್ಪದಲ್ಲಿ ಹೋಗಿದ್ದರು. ಈ ವೇಳೆ ಬಿರುಗಾಳಿ ಬೀಸಿದ್ದು, ತೆಪ್ಪ ಮಗುಚಿದೆ. ಈ ಅವಘಡಲ್ಲಿ ಇವರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಸ್ಥಳಕ್ಕೆ ಕೊಲ್ಹಾರ ತಹಸೀಲ್ದಾರ್ ಎಂ.ಎಸ್. ಬಾಗವಾನ ಭೇಟಿ ನೀಡಿ ಪರಿಶೀಲಿಸಿದರು. ಶವಗಳನ್ನು ಹೊರತೆಗೆಯಲು ಅಗ್ನಿಶಾಮಕ ದಳ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.