ನ್ಯೂಸ್

VIDEO: ವಯಸ್ಸಾಗಿದೆ ಅಷ್ಟೇ...ಜೀವನೋತ್ಸಾಹ ಕುಂದಿಲ್ಲ; ವೃದ್ಧೆಯರ ಸಖತ್​ ಸ್ಟೆಪ್​ಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಕೆಲವು ವಿಡಿಯೋಗಳು ತುಂಬ ಖುಷಿಕೊಡುತ್ತವೆ. ಜೀವನೋತ್ಸಾಹ ಮೂಡಿಸುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಕ್ಲಿಪ್​ ಸೋಷಿಯಲ್​ ಮೀಡಿಯಾಗಳಲ್ಲಿ ಭರ್ಜರಿ ವೈರಲ್​ ಆಗುತ್ತಿದೆ. ಇಬ್ಬರು ವೃದ್ಧೆಯರು, ರಸ್ತೆ ಬದಿಯಲ್ಲಿ ಒಂದು ಹಳೇ ಹಿಂದಿ ಹಾಡಿಗೆ ಸಖತ್​ ಎಂಜಾಯ್​ ಮಾಡುತ್ತ, ನೃತ್ಯ ಮಾಡುವ ವಿಡಿಯೋ ಇದು..!

ಟ್ವಿಟರ್​ ಬಳಕೆದಾರರೊಬ್ಬರು ಈ 15 ಸೆಕೆಂಡ್​ಗಳ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. 1971ರಲ್ಲಿ ಆಶಾ ಬೋಸ್ಲೆ ಅವರು ಹಾಡಿದ್ದ, ಪಿಯಾ ತೂ ಅಬ್ ತೋ ಆಜಾ ಎಂಬ ಹಾಡಿಗೆ ಫುಲ್​ ಖುಷಿಯಿಂದ, ತಮ್ಮದೇ ರೀತಿಯಲ್ಲಿ ನೃತ್ಯ ಮಾಡುವುದನ್ನು ನೋಡಿದರೆ ಎಂಥವರ ಮುಖದಲ್ಲೂ ನಗು ಮೂಡುತ್ತದೆ. ವಿಡಿಯೋ ಶೇರ್​ ಮಾಡಿಕೊಂಡಿರುವವರು ಇದೊಂದು ಮುದ್ದಾದ ದೃಶ್ಯ ಎಂದು ಕ್ಯಾಪ್ಷನ್ ಬರೆದಿದ್ದಾರೆ.

ಪಿಯಾ ತೂ ಅಬ್​ ತೋ ಆಜಾ ಹಾಡು ಜಿತೇಂದ್ರ ಮತ್ತು ಆಶಾ ಪರೇಖ್​ ಅಭಿನಯದ ಕಾರವಾನ್​ ಸಿನಿಮಾದ್ದು. ಆಗಿನ ಕಾಲಕ್ಕೆ ತುಂಬ ಪ್ರಸಿದ್ಧಿ ಪಡೆದಿತ್ತು. ವಿಡಿಯೋ 9 ಸಾವಿರಕ್ಕೂ ಅಧಿಕ ವೀವ್ಸ್​ ಪಡೆದಿದೆ. ನೆಟ್ಟಿಗರಂತೂ ತುಂಬ ಇಷ್ಟಪಟ್ಟಿದ್ದಾರೆ.

ವಿಡಿಯೋ ನೋಡಿ..ನಿಮಗೂ ಖುಷಿಯಾಗದಿದ್ದರೆ ಹೇಳಿ...