ಅದೈತ್ - ಅಜ್ಮಲ್​ 
ನ್ಯೂಸ್

ಗೂಗಲ್ ಮ್ಯಾಪ್‌ನಿಂದ ದಾರಿ ತಪ್ಪಿ ನದಿಗೆ ಬಿದ್ದ ಕಾರು: ಇಬ್ಬರು ವೈದ್ಯರ ಸಾವು

ಕೊಚ್ಚಿ: ಕೇರಳದಲ್ಲಿ ಭಾನುವಾರ ರಾತ್ರಿ ಘೋರ ದುರಣತವೊಂದು ಸಂಭವಿಸಿದೆ. ಗೂಗಲ್​ ಮ್ಯಾಪ್​ ಅನ್ನು ಅನುಸರಿಸಿದ ಕಾರೊಂದು ಪೆರಿಯಾರ್ ನದಿಗೆ ಉರುಳಿದ ಪರಿಣಾಮ ಇಬ್ಬರು ವೈದ್ಯರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು ನಗರದ ಆಸ್ಪತ್ರೆಗೆ ಸೇರಿಸಲಾಗಿದೆ.


ಅದ್ವೈತ್ (29) ಮತ್ತು ಅಜ್ಮಲ್ (29) ಮೃತರು. ನಗರದ ಪೆರಿಯಾರ್​ ನದಿ ಬಳಿಯ ರಸ್ತೆಯಲ್ಲಿ ತಡರಾತ್ರಿ ಕಾರ್​ನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಮಳೆ ಸುರಿಯುತ್ತಿದ್ದುದರಿಂದ ರಸ್ತೆ ಜಲಾವೃತಗೊಂಡಿತ್ತು. ಆಗ ದಾರಿ ಕಾಣಲೆಂದು ಗೂಗಲ್ ಮ್ಯಾಪ್ ನೋಡಿಕೊಂಡು ಪ್ರಯಾಣಿಸಿದ್ದಾರೆ.


ನೇರವಾಗಿ ತೆರಳಬೇಕಿದ್ದ ಅವರಿಗೆ ಮ್ಯಾಪ್​ನಲ್ಲಿ ದಾರಿ ಎಡಕ್ಕೆ ತೋರಿಸಿದೆ. ಅದರಂತೆ ಅವರು ನೀರಿನಲ್ಲಿ ಎಡಕ್ಕೆ ತಿರುಗಿಸಿದಾಗ ಕಾರು ನೀರಿನ ಆಳಕ್ಕೆ ಮುಗುಚಿ ಬಿದ್ದು ಅವಘಡ ಸಂಭವಿಸಿದೆ. ನದಿ ನೋಡಿ ರಸ್ತೆಯೇ ಇರಬೇಕೆಂದು ಭಾವಿಸಿ ಕಾರು ಚಲಾಯಿಸಿದ್ದರಿಂದ ದುರಂತ ಸಂಭವಿಸಿದೆ. ಸ್ಥಳೀಯರು ಮತ್ತು ಪೊಲೀಸರು ಕುಡಲೇ ನದಿಗಿಳಿದು ಮೂವರು ಗಾಯಾಳುಗಳನ್ನು ರಕ್ಷಿಸಿದ್ದಾರೆ.