ಬಿಹಾರ್: ಗೋರಖ್ಪುರ-ಕೋಲ್ಕತ ಪೂಜಾ ಸ್ಪೆಷಲ್ ರೈಲು ಹಳಿ ತಪ್ಪಿದೆ. ಸದ್ಯಕ್ಕೆ ಯಾವುದೇ ಸಾವು-ನೋವು ವರದಿ ಆಗಿಲ್ಲ. ಆದರೆ ಆ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದು, ರೈಲ್ವೆ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಗೋರಖ್ಪುರ-ಕೋಲ್ಕತ ಪೂಜಾ ಸ್ಪೆಷಲ್ 05048 ರೈಲಿನ ಎರಡು ಕೋಚ್ಗಳು ಇಂದು ಬಿಹಾರದ ಸಿಲೌಟ್ ಮತ್ತು ಸಿಹೊ ನಡುವೆ ಹಳಿ ತಪ್ಪಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. (ಏಜೆನ್ಸೀಸ್)